ಧಾರವಾಡ : ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕಾಗದ ರಹಿತ ನೋಂದಣಿ (Paperless Registration) ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೊಳಿಸುವ ಕುರಿತು ಮಾರ್ಗಸೂಚಿಗಳೊಂದಿಗೆ ಉಪ ನೋಂದಣಿ ಕಛೇರಿಗಳಲ್ಲಿ ತರಬೇತಿ ನೀಡುವಂತೆ ಸೂಚಿಸಿರುತ್ತಾರೆ.
ಧಾರವಾಡ ಉಪ ನೋಂದಣಿ ಕಛೇರಿಯಲ್ಲಿ ಜನವರಿ 27, 2026, ಹುಬ್ಬಳ್ಳಿ (ದಕ್ಷಿಣ) ಮತ್ತು ಹುಬ್ಬಳ್ಳಿ (ಉತ್ತರ) ಉಪ ನೋಂದಣಿ ಕಛೇರಿಯಲ್ಲಿ ಜನವರಿ 28, 2026, ಕುಂದಗೋಳ ಉಪ ನೋಂದಣಿ ಕಛೇರಿಯಲ್ಲಿ ಜನವರಿ 29, 2026, ನವಲಗುಂದ ಮತ್ತು ಅಣ್ಣಿಗೇರಿ ಉಪ ನೋಂದಣಿ ಕಛೇರಿಯಲ್ಲಿ ಜನವರಿ 30, 2026 ಹಾಗೂ ಕಲಘಟಗಿ ಉಪ ನೋಂದಣಿ ಕಛೇರಿಯಲ್ಲಿ ಜನವರಿ 31, 2026 ರಂದು ಕಾಗದ ರಹಿತ ನೋಂದಣಿ ಕುರಿತು ತರಬೇತಿ ಆಯೋಜಿಸಲಾಗಿದೆ.
ತರಬೇತಿ ಕಾರ್ಯಕ್ರಮಕ್ಕೆ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಗ್ರಾಮ ಒನ್. ಬಾಪೂಜಿ ಸೇವಾ ಕೇಂದ್ರ ಮತ್ತು ಆಸಕ್ತ ಸಾರ್ವಜನಿಕರು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆಯಬೇಕೆಂದು ಧಾರವಾಡ ಜಿಲ್ಲಾ ನೋಂದಣಾಧಿಕಾಗಳು ಹಾಗೂ ಮುದ್ರಾಂಕಗಳ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

