HomeKarnatakaBREAKING NEWS: ರೀಲ್ಸ್ ಮಾಡಲು ಕೆರೆಗೆ ಹಾರಿದ ಯುವಕ ನೀರುಪಾಲು

BREAKING NEWS: ರೀಲ್ಸ್ ಮಾಡಲು ಕೆರೆಗೆ ಹಾರಿದ ಯುವಕ ನೀರುಪಾಲು

ಬೆಂಗಳೂರು: ರೀಲ್ಸ್ ಕ್ರೇಜ್ ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. ರೀಲ್ಸ್ ಮಾಡಲೆಂದು ಕೆರೆಗೆ ಹಾರಿದ ಯುವಕ ನೀರುಪಾಲಾಗಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯ ಪಣತ್ತೂರು ಕೆರೆಯಲ್ಲಿ ನಡೆದಿದೆ.

ಮೂವರು ಯುವಕರು ರೀಲ್ಸ್ ಮಾಡಲೆಂದು ಕೆರೆ ಬಳಿ ಬಂದಿದ್ದರು. ಇಬ್ಬರು ಯುವಕರು ಕೆರೆಗೆ ಹಾರಿ ಈಜುತ್ತಿದ್ದರೆ, ಓರ್ವ ಯುವಕ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ. ಈಜುತ್ತಿದ್ದ ಇಬ್ಬರು ಯುವಕರಲ್ಲಿ ಓರ್ವ ಯುವಕ ನೀರು ಪಾಲಾಗಿದ್ದಾನೆ. ಇನ್ನೋರ್ವ ಯುವಕ ಈಜಿ ದಡ ಸೇರಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ನೀರುಪಾಲಾಗಿರುವ ಯುವಕನಿಗಾಗಿ ಶೋಧ ನಡೆಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular