HomeLatest Newsರೀಲ್ ಅಲ್ಲಾ ರಿಯಲ್ ! ಬಾತುಕೋಳಿ ಹೊಟ್ಟೆಯಲ್ಲಿ 10 ಗ್ರಾಂ. ಅಪ್ಪಟ ಚಿನ್ನ ಪತ್ತೆ!

ರೀಲ್ ಅಲ್ಲಾ ರಿಯಲ್ ! ಬಾತುಕೋಳಿ ಹೊಟ್ಟೆಯಲ್ಲಿ 10 ಗ್ರಾಂ. ಅಪ್ಪಟ ಚಿನ್ನ ಪತ್ತೆ!

ಬಂಗಾರದ ಮೊಟ್ಟೆ ಇಡುವ ಬಾತುಕೋಳಿಯ ಕಥೆಯನ್ನು ನಾವು ಕೇಳಿದ್ದೇವೆ, ಆದರೆ ಚೀನಾದಲ್ಲಿ ನಡೆದ ಈ ಘಟನೆ ಆ ಕಥೆಯನ್ನು ನೆನಪಿಸುವಂತಿದೆ. ಮಾಂಸಕ್ಕಾಗಿ ಬಾತುಕೋಳಿಯನ್ನು ಕತ್ತರಿಸುತ್ತಿದ್ದಾಗ ಅದರ ಹೊಟ್ಟೆಯಲ್ಲಿ 10 ಗ್ರಾಂ ಚಿನ್ನ ಪತ್ತೆಯಾಗಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ಘಟನೆಯ ವಿವರ:

ಚೀನಾದ ವ್ಯಕ್ತಿಯೊಬ್ಬರು ತಾವು ಸಾಕಿದ್ದ ಬಾತುಕೋಳಿಯನ್ನು ಆಹಾರಕ್ಕಾಗಿ ಬಳಸಲು ನಿರ್ಧರಿಸಿದ್ದರು. ಆದರೆ ಅದನ್ನು ಕತ್ತರಿಸಿದಾಗ, ಅದರ ಜೀರ್ಣಾಂಗವ್ಯೂಹದ ಬದಲು ಹೊಳೆಯುವ ಹಳದಿ ಲೋಹ ಕಂಡುಬಂದಿದೆ. ಇದನ್ನು ಪರೀಕ್ಷಿಸಿದಾಗ ಅದು ಅಪ್ಪಟ ಚಿನ್ನವೆಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂಗಾರ ಬಂದಿದ್ದು ಹೇಗೆ ? : ಈ ಬಾತುಕೋಳಿಗಳು ನದಿಯ ತೀರದಲ್ಲಿ ಮುಕ್ತವಾಗಿ ಮೇಯುತ್ತಿದ್ದವು. ಆ ಪ್ರದೇಶದಲ್ಲಿ ಈ ಹಿಂದೆ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಮಣ್ಣಿನಲ್ಲಿ ಹುಳುಗಳನ್ನು ಹುಡುಕಿ ತಿನ್ನುವ ಸಂದರ್ಭದಲ್ಲಿ, ಬಾತುಕೋಳಿಯು ಮಣ್ಣಿನಲ್ಲಿದ್ದ ಚಿನ್ನದ ಕಣಗಳನ್ನು ಆಕಸ್ಮಿಕವಾಗಿ ನುಂಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಲೋಹದ ಕಣಗಳನ್ನು ‘ಬರ್ನಿಂಗ್ ಟೆಸ್ಟ್’ಗೆ ಒಳಪಡಿಸಿದಾಗ, ಅವು ನಿಜವಾದ ಚಿನ್ನ ಎಂದು ದೃಢಪಟ್ಟಿದೆ. ಪತ್ತೆಯಾದ 10 ಗ್ರಾಂ ಚಿನ್ನದ ಮೌಲ್ಯ ಸುಮಾರು 12,000 ಯುವಾನ್, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು ₹1.62 ಲಕ್ಷ.

ಪ್ರಸ್ತುತ ಚೀನಾದಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 1,140 ರಿಂದ 1,190 ಯುವಾನ್ ಆಸುಪಾಸಿನಲ್ಲಿದೆ. ಮಾಂಸಕ್ಕಾಗಿ ಕತ್ತರಿಸಿದ ಬಾತುಕೋಳಿಯಿಂದ ಇಷ್ಟೊಂದು ದೊಡ್ಡ ಮೊತ್ತದ ಚಿನ್ನ ಸಿಕ್ಕಿರುವುದು ಮಾಲೀಕನಿಗೆ ಅನಿರೀಕ್ಷಿತ ಅದೃಷ್ಟ ತಂದಂತಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular