ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2024ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರಮಾಣ ಪತ್ರಗಳನ್ನು ಪಡೆಯುವ ವಿಧಾನ ಮತ್ತು ಅನುತ್ತೀರ್ಣರಾದವರಿಗೆ ಅಂಕಗಳ ಮರುಎಣಿಕೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗಿದೆ.
2024ರ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ದಿನಾಂಕ 12-03-2026 ರಿಂದ ಆಯೋಗದ ಅಧಿಕೃತ ವೆಬ್ಸೈಟ್ ಮೂಲಕ ಪ್ರಮಾಣ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಡೌನ್ಲೋಡ್ ಮಾಡುವ ವಿಧಾನ: 1. kpsc.kar.nic.in ವೆಬ್ಸೈಟ್ನಲ್ಲಿ “Departmental Examination 2024 II session” ಲಿಂಕ್ ಕ್ಲಿಕ್ ಮಾಡಬೇಕು. 2. ಡಿಜಿಲಾಕರ್ ಅಕೌಂಟ್ನೊಂದಿಗೆ ಆಧಾರ್ ಸಂಖ್ಯೆ ಜೋಡಿಸಿರಬೇಕು. 3. ನೋಂದಣಿ ಸಂಖ್ಯೆಯನ್ನು (7 ಅಂಕಿಗಳು) Username ಆಗಿ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು Password ಆಗಿ ಬಳಸಿ ಲಾಗಿನ್ ಆಗಬೇಕು.
ಅಂಕಗಳ ಮರುಎಣಿಕೆ(Retotalling): 19 ವಿವರಣಾತ್ಮಕ ಪತ್ರಿಕೆಗಳಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಅಂಕಗಳ ಮರುಎಣಿಕೆಗೆ ಅರ್ಜಿ ಸಲ್ಲಿಸಬಹುದು.
ಅವಧಿ: ದಿನಾಂಕ 03-03-2026 ರಿಂದ 19-03-2026 ರವರೆಗೆ.
ಶುಲ್ಕ: ಪ್ರತಿ ಪತ್ರಿಕೆಗೆ 100/- ರೂ.ಗಳನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಸೂಚನೆ: ಅಂಕಗಳ ಮರುಎಣಿಕೆಗೆ ಕೇವಲ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಫ್ಲೈನ್ ಮನವಿಗಳನ್ನು ಪುರಸ್ಕರಿಸಲಾಗುವುದಿಲ್ಲ. ಪ್ರಮಾಣ ಪತ್ರ ಡೌನ್ಲೋಡ್ ಮಾಡುವಾಗ ತಾಂತ್ರಿಕ ತೊಂದರೆ ಎದುರಾದಲ್ಲಿ ಅಭ್ಯರ್ಥಿಗಳು ಸೇವಾಸಿಂಧು ಸಹಾಯವಾಣಿ ಸಂಖ್ಯೆ: 080-24410574 ಅಥವಾ 080-2441057 ಅನ್ನು ಸಂಪರ್ಕಿಸಬಹುದಾಗಿದೆ.


