HomeLatest NewsBIG NEWS : ಹಾಸನದಲ್ಲಿ 'ಹೃದಯಾಘಾತ' ಹೆಚ್ಚಳಕ್ಕೆ ಮಾಂಸಹಾರ ಸೇವನೆ ಕಾರಣ : ಶಾಸಕ ಹೆಚ್.ಡಿ...

BIG NEWS : ಹಾಸನದಲ್ಲಿ ‘ಹೃದಯಾಘಾತ’ ಹೆಚ್ಚಳಕ್ಕೆ ಮಾಂಸಹಾರ ಸೇವನೆ ಕಾರಣ : ಶಾಸಕ ಹೆಚ್.ಡಿ ರೇವಣ್ಣ

ಹಾಸನ : ಹಾಸನದಲ್ಲಿ ಹೃದಯಾಘಾತ ಹೆಚ್ಚಳಕ್ಕೆ ‘ರೆಡ್ ಮೀಟ್’ ಕಾರಣ ಎಂದು ಶಾಸಕ ಹೆಚ್.ಡಿ ರೇವಣ್ಣ ಹೇಳಿದ್ದಾರೆ.

ಹಾಸನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತನಾಡಿದ ಅವರು ಹಾಸನದಲ್ಲಿ ಬಾರ್ & ರೆಸ್ಟೋರೆಂಟ್ ಸಂಖ್ಯೆ ಹೆಚ್ಚಾಗಿದೆ. ಆದಾಯ  ಬರುತ್ತೆ ಅಂತ ಹೆಚ್ಚಿನ ಸಂಖ್ಯೆಯಲ್ಲಿ ಬಾರ್ ತೆರೆದಿದ್ದಾರೆ .  ಬಾರ್ ಗಳಲ್ಲಿ ಕುಡಿದು ಅನಾಹುತ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಇತ್ತೀಚೆಗೆ ಜನರು ಬೀಗರೂಟದಲ್ಲಿ ಹೆಚ್ಚು ರೆಡ್ ಮೀಟ್ ತಿನ್ನುತ್ತಾರೆ. ಇದರಿಂದ ಹೃದಯಾಘಾತ ಹೆಚ್ಚಳವಾಗುತ್ತಿದೆ. ಬಾರ್ ಗಳಲ್ಲಿ ಕೂಡ ಹೆಚ್ಚಿನ ಜನರು ಮದ್ಯ ಕುಡಿದು ರೆಡ್ ಮೀಟ್ ತಿನ್ನುತ್ತಾರೆ . ಇದರಿಂದ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಳವಾಗುತ್ತಿದೆ ಎಂದು ಹೇಳಿದರು. ಹಾಸನದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಂಭವಿಸುತ್ತಿರುವ ಹೃದಯಾಘಾತಕ್ಕೆ 40 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular