ಬೆಂಗಳೂರು : ಚೊಚ್ಚಲ ಐಪಿಎಲ್ ಟ್ರೋಫಿಯೊಂದಿಗೆ ಇಂದು ಮಧ್ಯಾಹ್ನ ಬೆಂಗಳೂರಿಗೆ ‘ರೆಡ್ ಆರ್ಮಿ’ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದು, ಸಂಜೆ ಭರ್ಜರಿ ವಿಕ್ಟರಿ ಪರೇಡ್ ನಡೆಸಲಿದೆ.
ಅಹಮದಾಬಾದ್ ನಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 1:30 ಕ್ಕೆ ಬೆಂಗಳೂರಿಗೆ ಆರ್ ಸಿಬಿ ತಂಡ ಬಂದಿಳಿಯಲಿದೆ. ನಂತರ ವಿಶ್ರಾಂತಿ ಪಡೆಯಲಿರುವ ಆರ್ ಸಿಬಿ ತಂಡ ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾರೆ. ನಂತರ ಸಂಜೆ ಭರ್ಜರಿ ‘ವಿಕ್ಟರಿ ಪರೇಡ್’ ನಡೆಸಲಿದೆ.
IPL ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ತಂಡ ವಿಜಯದ ಯಾತ್ರೆ ನಡೆಸಲು ಸಜ್ಜಾಗಿದೆ. ಇಂದು ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಕೊಹ್ಲಿ ಬಾಯ್ಸ್ ವಿಜಯ ಯಾತ್ರೆ ನಡೆಸಲಿದೆ. ಐಪಿಎ’ಲ್ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ತಂಡ ವಿಕ್ಟರಿ ಪರೇಡ್ ನಡೆಸಲಿದೆ.ರಾಜ್ಯ ಸರ್ಕಾರದ ಕಡೆಯಿಂದಲೇ ‘ವಿಕ್ಟರಿ ಪರೇಡ್’ ನಡೆಸಲು ಚಿಂತನೆ ನಡೆಸಲಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ.

