ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಬಾಣಸಿಗರು, ಮೋಚಿ, ದರ್ಜಿ, ಕ್ಷೌರಿಕ, ಸ್ವಚ್ಛತಾಗಾರ, ಬಣ್ಣ ಬಳಿಯುವವರು, ಬಡಗಿ, ಮಾಲಿ, ವೆಲ್ದರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಕೈಗೊಳ್ಳಲಾಗುವುದು.
ವಿವಿಧ ಟ್ರೇಡ್ ಗಳಲ್ಲಿ ಕಾನ್ಸ್ಟೇಬಲ್ ಟ್ರೇಡ್ಸ್ ಮನ್ ತಾತ್ಕಾಲಿಕ ಹುದ್ದೆಗಳ ಭರ್ತಿಗಾಗಿ ಭಾರತೀಯ ಪೌರರಾಗಿರುವ ಪುರುಷರು ಮತ್ತು ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
945 ಹುದ್ದೆಗಳು ಪುರುಷರಿಗೆ, 103 ಹುದ್ದೆಗಳು ಮಹಿಳೆಯರಿಗೆ ಸೇರಿ ಒಟ್ಟು 1048 ಹುದ್ದೆಗಳು ನೇಮಕಾತಿ ನಡೆಸಲಾಗುವುದು. ಸಂಪೂರ್ಣ ವಿವರಗಳಿಗಾಗಿ 22 ರಿಂದ 28ನೇ ಫೆಬ್ರವರಿ 2025ನೇ ಆವೃತ್ತಿಯ ಎಂಪ್ಲಾಯ್ ಮೆಂಟ್ ನ್ಯೂಸ್ ರೋಜ್ಗಾರ್ ಸಮಾಚಾರದಲ್ಲಿ ಪ್ರಕಟವಾಗಿರುವ ಜಾಹೀರಾತು ನೋಡುವುದು ಅಥವಾ ಸಿಐಎಸ್ಎಫ್ ನ ಜಾಲತಾಣ www.cisfrectt.cisf.gov.in ಗೆ ಭೇಟಿ ನೀಡಬಹುದಾಗಿದೆ.