ಕೂದಲು ಕಸಿ ಮಾಡುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಕೂದಲು ಉದುರುವ ಸಮಸ್ಯೆ ಹೆಚ್ಚಿದಾಗ ಪುರುಷರು ಹೆಚ್ಚಾಗಿ ಕೂದಲ ಕಸಿ ಅಥವಾ ಹೇರ್ ಟ್ರಾನ್ಸಪ್ಲಾಂಟ್ ಮಾಡಿಕೊಳ್ಳುವುದನ್ನು ನೀವು ಕಂಡಿರಬಹುದು. ಈ ಚಿಕಿತ್ಸೆಯನ್ನು ಎಲ್ಲರೂ ಮಾಡಿಸಿಕೊಳ್ಳಲು ಏಕೆ ಸಾಧ್ಯವಿಲ್ಲ ಎಂಬುದು ನಿಮಗೆ ಗೊತ್ತೇ?

ಕೂದಲ ಕಸಿ ಮಾಡುವ ಮುನ್ನ ನಿಮ್ಮ ತಲೆಯ ಉಳಿದ ಕೂದಲಿನ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಬೇಕಾಗುತ್ತದೆ. ಅದರೊಂದಿಗ ನಿಮ್ಮ ಕೂದಲಿಗೆ ಹೊಂದಿಕೊಳ್ಳುವ ಪ್ರಕಾರದ ಕೂದಲನ್ನೇ ಕಸಿ ಮಾಡಬೇಕಾಗುತ್ತದೆ. ಇದಕ್ಕೆಲ್ಲಾ ಸುದೀರ್ಘ ಸಮಯ ಬೇಕಾಗುತ್ತದೆ.

ಹಾಗಾಗಿ ಸಹಜವಾಗಿಯೇ ಈ ಪ್ರಕ್ರಿಯೆ ದುಬಾರಿ. ಕೂದಲ ಕಸಿ ನಡೆಸುವಾಗಲೂ ಹಲವು ವೈದ್ಯರು ನಿಗಾ ವಹಿಸಬೇಕಾಗುತ್ತದೆ. ಸುದೀರ್ಘ ಅವಧಿಯವರೆಗೆ ನಡೆಯುವ ಈ ಕ್ರಿಯೆ ಹಣವಿಲ್ಲದವರಿಗೆ ಹೇಳಿಮಾಡಿಸಿದ್ದಂತೂ ಅಲ್ಲವೇ ಅಲ್ಲ. ಅಲ್ಲದೆ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಮೂರರಿಂದ ಆರು ತಿಂಗಳು ಬೇಕಾಗುತ್ತದೆ.

ಈ ಪ್ರಕ್ರಿಯೆಯಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳೂ ಬೀರಬಹುದು. ವೈದ್ಯರ ಸಲಹೆ ಪಡೆಯದೆ ನೀವು ಯಾವುದೇ ಶ್ಯಾಂಪೂ ಅಥವಾ ಎಣ್ಣೆ ಬಳಸುವಂತಿಲ್ಲ ಹಾಗೂ ತಲೆ ಸ್ನಾನವನ್ನೂ ಮಾಡುವಂತಿಲ್ಲ. ಈ ಚಿಕಿತ್ಸೆ ನಿಮ್ಮ ತ್ವಚೆಯ ಬಣ್ಣದ ಮೇಲೂ ಕೆಲವೊಮ್ಮೆ ಪರಿಣಾಮ ಬೀರುವುದುಂಟು. ಹಾಗಾಗಿ ಕೂದಲ ಕಸಿ ಮಾಡುವ ಮುನ್ನ ಆಲೋಚಿಸಿ ನಿರ್ಧರಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read