HomeKarnataka'RCB ಬರೀ ಬ್ಯುಸಿನೆಸ್, ಕರ್ನಾಟಕಕ್ಕೆ ಇದರಿಂದ ಯಾವುದೇ ಉಪಯೋಗವಿಲ್ಲ' : ನಟ ಚೇತನ್ ಅಹಿಂಸಾ ಟೀಕೆ...

‘RCB ಬರೀ ಬ್ಯುಸಿನೆಸ್, ಕರ್ನಾಟಕಕ್ಕೆ ಇದರಿಂದ ಯಾವುದೇ ಉಪಯೋಗವಿಲ್ಲ’ : ನಟ ಚೇತನ್ ಅಹಿಂಸಾ ಟೀಕೆ |WATCH VIDEO

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕುರಿತು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಆರ್‌ಸಿಬಿ ಒಂದು ಕ್ರೀಡಾ ತಂಡಕ್ಕಿಂತ ಹೆಚ್ಚಾಗಿ ವಾಣಿಜ್ಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಆರ್‌ಸಿಬಿ ಒಂದು ಕಂಪನಿ ಅಥವಾ ವ್ಯವಹಾರವಾಗಿದೆ. ಬೆಂಗಳೂರಿನ ಹೆಸರನ್ನು ಬಳಸಿಕೊಂಡು ಅವರು ಲಾಭ ಗಳಿಸುತ್ತಿದ್ದಾರೆಯೇ ಹೊರತು, ಇದರಿಂದ ರಾಜ್ಯಕ್ಕೆ ಅಥವಾ ಬೆಂಗಳೂರಿಗೆ ಯಾವುದೇ ನೇರವಾದ ಸಾಮಾಜಿಕ ಅಥವಾ ಆರ್ಥಿಕ ಉಪಯೋಗಗಳಿಲ್ಲ ಎಂದು ಚೇತನ್ ಅಹಿಂಸಾ ಅಭಿಪ್ರಾಯಪಟ್ಟಿದ್ದಾರೆ.ಆರ್‌ಸಿಬಿ ತಂಡದ ಯಶಸ್ಸಿನ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಚೇತನ್ ಅಹಿಂಸಾ ಸ್ಪಷ್ಟಪಡಿಸಿದ್ದಾರೆ.ಕಳೆದ ವರ್ಷ ನಡೆದ ಕೆಲವು ದುರಂತಗಳನ್ನು ಪ್ರಸ್ತಾಪಿಸಿದ ಅವರು, ಕ್ರೀಡೆಯ ಹೆಸರಿನಲ್ಲಿ ನಡೆಯುವ ಇಂತಹ ವಾಣಿಜ್ಯೀಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್ ಸಿ ಬಿ ಒಂದು ಕಂಪನಿ , ಒಂದು ಬ್ಯುಸಿನೆಸ್ ಅವರು ಬೆಂಗಳೂರು ಹೆಸರು ಇಟ್ಟುಕೊಂಡು ಲಾಭ ಪಡೆಯುತ್ತಿದ್ದಾರೆ. ಇದರಿಂದ ನಮಗೆ ಆಗಲಿ, ರಾಜ್ಯಕ್ಕೆ ಆಗಲಿ ಏನೂ ಉಪಯೋಗವಿಲ್ಲ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟ ಚೇತನ್ ಅಹಿಂಸಾ ಅವರು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಹಲವು ಬಾರಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಜಾಗದ ಕುರಿತು ಅವರು ನೀಡಿದ್ದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.ಯಾವುದೇ ವಿಷಯದ ಬಗ್ಗೆ ಚೇತನ್ ಅಹಿಂಸಾ ಅವರು ಮಾತನಾಡುವಾಗ ಅದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ತೀವ್ರ ಚರ್ಚೆಗಳಿಗೆ ವೇದಿಕೆಯಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular