HomeLive Newsಐಪಿಎಲ್ 2024; ಇಂದು RCB ಮತ್ತು ಗುಜರಾತ್ ಟೈಟನ್ಸ್ ಕಾದಾಟ

ಐಪಿಎಲ್ 2024; ಇಂದು RCB ಮತ್ತು ಗುಜರಾತ್ ಟೈಟನ್ಸ್ ಕಾದಾಟ

ನಿನ್ನೆ ನಡೆದ ಐಪಿಎಲ್ ನ  51ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು 24 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ತನ್ನ ಓಂ ಗ್ರೌಂಡ್ ನಲ್ಲಿ ಕೇವಲ 169 ರನ್ಗಳ ಸಾಧಾರಣ  ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ಗೆಲ್ಲುವ ಪಂದ್ಯವನ್ನು ಕೊನೆ ಹಂತದಲ್ಲಿ ಕೈ ಚೆಲ್ಲಿದೆ.

ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿದ್ದು, ಕಳೆದ ಪಂದ್ಯದ ಸೇಡನ್ನು ತೀರಿಸಿಕೊಳ್ಳಲು ಗುಜರಾತ್ ಟೈಟನ್ಸ್ ಸಜ್ಜಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೆಮಿ ಫೈನಲ್ ಪ್ರವೇಶಿಸುವ ಯಾವುದೇ ಅವಕಾಶವಿಲ್ಲದೆ ಇರುವ ಕಾರಣ ತನ್ನ ಪ್ರತಿಷ್ಠೆಗಾಗಿ ಈ ಪಂದ್ಯದಲ್ಲಿ ಜಯಭೇರಿ ಆಗಲು ನೋಡುತ್ತಿದೆ. ಇನ್ನು ಗುಜರಾತ್ ಟೈಟನ್ಸ್ ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular