HomeBusinessದೇಶಾದ್ಯಂತ 2000 ರೂ. ಚಲಾವಣೆ ಸ್ಥಗಿತ: ನಿಮ್ಮಲ್ಲಿ 2 ಸಾವಿರ ರೂ. ನೋಟುಗಳಿದ್ದರೆ ಹೀಗೆ ಬದಲಾವಣೆ...

ದೇಶಾದ್ಯಂತ 2000 ರೂ. ಚಲಾವಣೆ ಸ್ಥಗಿತ: ನಿಮ್ಮಲ್ಲಿ 2 ಸಾವಿರ ರೂ. ನೋಟುಗಳಿದ್ದರೆ ಹೀಗೆ ಬದಲಾವಣೆ ಮಾಡಿಕೊಳ್ಳಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ರೂ. ನೋಟು ಚಲಾವಣೆ ಸ್ಥಗಿತಗೊಳಿಸಿದೆ. ಮೇ 23 ರಿಂದ ನೋಟು ಬದಲಿಸಿಕೊಳ್ಳಲು ಆರ್‌ಬಿಐ ಅವಕಾಶ ಕಲ್ಪಿಸಿದೆ.

ಈ ಕುರಿತಾಗಿ ಎಲ್ಲಾ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಈ ಮೂಲಕ ದೇಶಾದ್ಯಂತ 2000 ರೂ. ನೋಟು ಬ್ಯಾನ್ ಮಾಡಲಾಗಿದೆ. ಸೆಪ್ಟೆಂಬರ್ 30ರ ನಂತರ 2000 ರೂ. ನೋಟು ಚಲಾವಣೆಯಲ್ಲಿ ಇರುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2000 ರೂ. ನೋಟು ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಎಲ್ಲಾ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ. 2016 ರ ನವೆಂಬರ್ ನಲ್ಲಿ 2000 ರೂ. ನೋಟು ಚಲಾವಣೆಗೆ ತರಲಾಗಿತ್ತು. 2018ರಲ್ಲಿ 2000 ರೂ. ನೋಟು ಮುದ್ರಣವನ್ನು ಆರ್ಬಿಐ ಸ್ಥಗಿತಗೊಳಿಸಿತ್ತು.

ಈಗ 2,000 ರೂ. ನೋಟು ಚಲಾವಣೆಯನ್ನು ಆರ್‌ಬಿಐ ಹಿಂಪಡೆದುಕೊಂಡಿದ್ದು ನೋಟು ಬದಲಾವಣೆಗೆ ಸೆಪ್ಟೆಂಬರ್ 30ರವರೆಗೆ ಅವಕಾಶ ಕಲ್ಪಿಸಿದೆ. ಬ್ಯಾಂಕುಗಳಿಗೆ ತೆರಳಿ 2000 ರೂ. ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಮೇ 23ರ ನಂತರ ಬ್ಯಾಂಕುಗಳಿಗೆ ಹೋಗಿ ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಒಮ್ಮೆಗೆ 20 ಸಾವಿರ ರೂಪಾಯಿ ಮಾತ್ರ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ, 2023ರ ಸೆಪ್ಟಂಬರ್ 30ರವರೆಗೆ 2000 ನೋಟುಗಳನ್ನು ಡಿಪಾಸಿಟ್ ಮಾಡಬಹುದು, ಬ್ಯಾಂಕುಗಳಲ್ಲಿ ಡಿಪಾಸಿಟ್ ಮಾಡಲು ಆರ್‌ಬಿಐ ಗ್ರಾಹಕರಿಗೆ ಅವಕಾಶ ನೀಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular