HomeIndiaRBI ಬಿಗ್‌ ಅಲರ್ಟ್‌: ಡಿ. 31ರ ಬಳಿಕ ಹಳೆಯ ಚೆಕ್‌ಬುಕ್‌ ಬಂದ್‌! ಜನವರಿ 1ರಿಂದ ಹೊಸ...

RBI ಬಿಗ್‌ ಅಲರ್ಟ್‌: ಡಿ. 31ರ ಬಳಿಕ ಹಳೆಯ ಚೆಕ್‌ಬುಕ್‌ ಬಂದ್‌! ಜನವರಿ 1ರಿಂದ ಹೊಸ ನಿಯಮ

ಬ್ಯಾಂಕ್ ಖಾತೆದಾರರಿಗೆ ಮಹತ್ವದ ಮಾಹಿತಿ. ನೀವು ಇನ್ನೂ ಹಳೆಯ ಚೆಕ್‌ಬುಕ್ ಬಳಸುತ್ತಿದ್ದರೆ ಈ ವಿಷಯವನ್ನು ಗಮನಿಸಿ. ಬ್ಯಾಂಕಿಂಗ್ ವಂಚನೆಗಳನ್ನು ತಡೆಯುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಚೆಕ್‌ಬುಕ್‌ಗಳ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಡಿಸೆಂಬರ್ 31, 2026ರ ಬಳಿಕ ಹಳೆಯ ಚೆಕ್‌ಬುಕ್‌ಗಳು ಅಮಾನ್ಯವಾಗಲಿದ್ದು, 2027ರ ಜನವರಿ 1ರಿಂದ ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವ ಚೆಕ್‌ಬುಕ್‌ಗಳನ್ನು ಮಾತ್ರ ಬಳಸಬೇಕಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜನವರಿ 1ರಿಂದ ಹೊಸ ಚೆಕ್‌ಬುಕ್

ಪ್ರಸ್ತುತ ಬಳಕೆಯಲ್ಲಿರುವ ಚೆಕ್‌ಬುಕ್‌ಗಳಲ್ಲಿ ಚೆಕ್ ಸಂಖ್ಯೆ ಮತ್ತು MICR ಕೋಡ್‌ಗಳು ಮುಖ್ಯವಾಗಿ ಅಂಕಿಗಳ ರೂಪದಲ್ಲಿರುತ್ತವೆ. ಆದರೆ ಹೊಸ ಚೆಕ್‌ಬುಕ್‌ಗಳಲ್ಲಿ ಅಂಕಿಗಳ ಜತೆಗೆ ಅಕ್ಷರಗಳು ಸೇರಿದಂತೆ ಆಲ್ಫಾ-ನ್ಯೂಮರಿಕ್ ಕೋಡ್‌ಗಳನ್ನು ಬಳಸಲಾಗುತ್ತದೆ.

ಹೊಸ ಚೆಕ್‌ಗಳಲ್ಲಿ ವಿಶೇಷ ವಾಟರ್‌ಮಾರ್ಕ್, ಯುವಿ ಬೆಳಕಿನಲ್ಲಿ ಮಾತ್ರ ಕಾಣಿಸುವ ಅದೃಶ್ಯ ಶಾಯಿ, ಮೈಕ್ರೋ ಪ್ರಿಂಟಿಂಗ್ ಸೇರಿದಂತೆ ಹಲವು ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಚೆಕ್‌ಗಳನ್ನು ನಕಲು ಮಾಡುವುದು ಅಥವಾ ತಿರುಚುವುದು ಕಷ್ಟವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸ ಚೆಕ್‌ಬುಕ್‌ಗಳು RBIಯ ಪಾಸಿಟಿವ್ ಪೇ ಸಿಸ್ಟಮ್‌ನೊಂದಿಗೆ ಹೊಂದಾಣಿಕೆಯಾಗುವಂತೆ ಇರಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಡಿಸೆಂಬರ್ 31, 2026ರವರೆಗೆ ಮಾತ್ರ ಹಳೆಯ ಚೆಕ್‌ಗಳು ಮಾನ್ಯವಾಗಿದ್ದು, 2027ರ ಜನವರಿ 1ರಿಂದ ಹೊಸ ಚೆಕ್‌ಬುಕ್‌ಗಳನ್ನು ಬಳಸಬೇಕಾಗುತ್ತದೆ.

ಈಗಾಗಲೇ ಕೆಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಹೊಸ ಚೆಕ್‌ಬುಕ್‌ಗಳನ್ನು ನೀಡಲು ಆರಂಭಿಸಿವೆ.

ಹೊಸ ಚೆಕ್‌ಬುಕ್‌ನ ಪ್ರಮುಖ ವೈಶಿಷ್ಟ್ಯಗಳು

  • ಆಲ್ಫಾ-ನ್ಯೂಮರಿಕ್ ಕೋಡ್‌ಗಳ ಬಳಕೆ

  • ವಿಶೇಷ ವಾಟರ್‌ಮಾರ್ಕ್

  • ಯುವಿ ಬೆಳಕಿನಲ್ಲಿ ಕಾಣಿಸುವ ಅದೃಶ್ಯ ಶಾಯಿ

  • ಮೈಕ್ರೋ ಪ್ರಿಂಟಿಂಗ್ ತಂತ್ರಜ್ಞಾನ

  • ನಕಲಿ ಚೆಕ್‌ಗಳನ್ನು ತಡೆಯಲು ಹೆಚ್ಚಿನ ಭದ್ರತೆ

  • ವೇಗವಾದ ಡಿಜಿಟಲ್ ಸ್ಕ್ಯಾನಿಂಗ್ ಮತ್ತು ಕ್ಲಿಯರಿಂಗ್

  • ಪಾಸಿಟಿವ್ ಪೇ ಸಿಸ್ಟಮ್‌ನೊಂದಿಗೆ ಹೊಂದಾಣಿಕೆ

ಹಳೆಯ ಚೆಕ್‌ಬುಕ್‌ಗಳನ್ನು ನಕಲು ಮಾಡುವುದು ಅಥವಾ ತಿರುಚುವುದು ಸುಲಭವಾಗಿರುವುದರಿಂದ ವಂಚನೆಗಳ ಅಪಾಯವಿದೆ. ಹೊಸ ಭದ್ರತಾ ವೈಶಿಷ್ಟ್ಯಗಳಿಂದ ಇಂತಹ ವಂಚನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ.

UPI ಬಳಕೆ ಹೆಚ್ಚಾದ ಬಳಿಕ ಸಣ್ಣ ಮೊತ್ತದ ಹಣ ವರ್ಗಾವಣೆಗೆ ಚೆಕ್‌ಗಳ ಬಳಕೆ ಕಡಿಮೆಯಾಗಿದೆ. ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಮಾತ್ರ ಹೆಚ್ಚಿನವರು ಚೆಕ್‌ಗಳನ್ನು ಬಳಸುತ್ತಿದ್ದಾರೆ. ಹೊಸ ನಿಯಮಗಳಿಂದ ಚೆಕ್ ವಹಿವಾಟುಗಳಲ್ಲಿ ಹೆಚ್ಚಿನ ಭದ್ರತೆ ಮತ್ತು ಪಾರದರ್ಶಕತೆ ತರಲು ಸಾಧ್ಯವಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular