HomeBusinessಹಣದುಬ್ಬರ ನಿರ್ವಹಣೆಗೆ ಹೆಚ್ಚಿನ ಗಮನ: ರೆಪೊ ದರ ಯಥಾಸ್ಥಿತಿ ಸಾಧ್ಯತೆ

ಹಣದುಬ್ಬರ ನಿರ್ವಹಣೆಗೆ ಹೆಚ್ಚಿನ ಗಮನ: ರೆಪೊ ದರ ಯಥಾಸ್ಥಿತಿ ಸಾಧ್ಯತೆ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹಣದುಬ್ಬರ ನಿರ್ವಹಣೆಗೆ ಹೆಚ್ಚಿನ ಗಮನಹರಿಸುವ ಉದ್ದೇಶದಿಂದ ಏಪ್ರಿಲ್ ನಲ್ಲಿಯೂ ರೆಪೊ ದರಗಳನ್ನು ಯಥಾಸ್ಥಿತಿ ಮುಂದುವರೆಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಪ್ರಿಲ್ ನಲ್ಲಿ ಬಡ್ಡಿ ದರಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಹಣದುಬ್ಬರವನ್ನು ಗುರಿಯ ಶೇಕಡ 4ಕ್ಕೆ ತರುವುದು ಆರ್‌ಬಿಐ ಆದ್ಯತೆಯಾಗಿದೆ. ಬಡ್ಡಿ ದರಗಳನ್ನು ನಿರ್ಧಾರ ಮಾಡುವ ಆರ್ಬಿಐ ಅಂಗವಾಗಿರುವ ಹಣಕಾಸು ನೀತಿ ಪರಾಮರ್ಶೆ ಸಮಿತಿ ಬಡ್ಡಿ ದರಗಳನ್ನು ಕಡಿತ ಮಾಡುವ ವಿಚಾರದಲ್ಲಿ ಅಮೆರಿಕ, ಬ್ರಿಟನ್ ರೀತಿಯ ಕೆಲವು ಪ್ರಮುಖ ಆರ್ಥಿಕತೆಗಳ ಕೇಂದ್ರೀಯ ಬ್ಯಾಂಕುಗಳ ಕಾದು ನೋಡುವ ನೀತಿಯನ್ನು ಅನುಸರಿಸಬಹುದಾಗಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular