HomeKarnatakaಪಡಿತರ ಚೀಟಿದಾರರೇ ಗಮನಿಸಿ : ʻಅನ್ನಭಾಗ್ಯʼ ಹಣ ಪಡೆಯಲು ಈ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ

ಪಡಿತರ ಚೀಟಿದಾರರೇ ಗಮನಿಸಿ : ʻಅನ್ನಭಾಗ್ಯʼ ಹಣ ಪಡೆಯಲು ಈ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ

ಬೆಂಗಳೂರು : ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿಯ ಬದಲು ರೂ.34 ರಂತೆ ನೇರ ನಗದು ಪಾವತಿಯಾಗದ ಫಲಾನುಭವಿಗಳು ಹಣ ಬರಲು ಪೂರಕ ಪರಿಶೀಲಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ಫಲಾನುಭವಿಗಳು ಪರಿಶೀಲಿಸಬೇಕಾದ ದಾಖಲೆಗಳು:

ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಹೆಸರು ಮತ್ತು ಅವರ ಆಧಾರ್ ಕಾರ್ಡ್‍ನಲ್ಲಿ ಹೆಸರು ಸರಿಯಾಗಿದೆಯೇ ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಿಬೇಕು. ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ಯಾಂಕ್ ಖಾತೆ ಸರಿಯಿಲ್ಲದಿದ್ದರೆ ಹೊಸದಾಗಿ ಅಂಚೆ ಕಚೇರಿಯಲ್ಲಿ (ಪೋಸ್ಟ್ ಆಫೀಸ್) ಹೊಸ ಐ.ಬಿ.ಪಿ.ಬಿ ಖಾತೆ ತೆರೆಯಬೇಕು. ಮೇಲ್ಕಂಡ ಎಲ್ಲಾ ಅಂಶಗಳು ಸರಿಯಾಗಿದ್ದಲ್ಲಿ ತಮ್ಮ ಖಾತೆಗೆ ಹಣ ಜಮೆಯಾಗಲಿದೆ. ಅರ್ಹರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು.

For Latest News Updates, Join Our Whatsapp Community🚩
RELATED ARTICLES

Most Popular