ನವದೆಹಲಿ : ಟಾಮಿ ಜೆನೆಸಿಸ್ ಎಂದೇ ಜನಪ್ರಿಯರಾಗಿರುವ ಕೆನಡಾದ ರ್ಯಾಪರ್ ಮತ್ತು ಮಾಡೆಲ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಹಿಂದೂ ದೇವತೆ ಕಾಳಿಯನ್ನು ಚಿತ್ರಿಸಿರುವ ಟ್ರೂ ಬ್ಲೂ ಹೆಸರಿನ ಆಲ್ಬಂ ಸಾಂಗ್ ರಿಲೀಸ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.
ವೀಡಿಯೊದಲ್ಲಿ, ಜೆನೆಸಿಸ್ ತನ್ನ ದೇಹವನ್ನು ನೀಲಿ ಬಣ್ಣದಿಂದ ಅಲಂಕರಿಸಿಕೊಂಡು, ಕೆಂಪು ಬಿಂದಿ ಮತ್ತು ಬಳೆಗಳು, ಮತ್ತು ಚಿನ್ನದ ಬಿಕಿನಿ ಒಳಗೊಂಡಂತೆ ಸಾಂಪ್ರದಾಯಿಕ ಚಿನ್ನದ ಆಭರಣಗಳನ್ನು ಧರಿಸಿ ಕಾಣಿಸಿಕೊಂಡಿದ್ದಾಳೆ.
ಅವಳು ಶಿಲುಬೆಯನ್ನು ನೆಕ್ಕುವುದು ಮುಂತಾದ ಕ್ರಿಯೆಗಳನ್ನು ಸಹ ಮಾಡಿದ್ದಾಳೆ. . ಅಲ್ಲದೇ ಕಾಳಿ ಅವತಾರದಲ್ಲಿದ್ದುಕೊಂಡು ಧೂಮಪಾನ ಮಾಡಿದ್ದಾರೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊ ಹಿಂದೂ ಮತ್ತು ಕ್ರಿಶ್ಚಿಯನ್ ಭಾವನೆಗಳನ್ನು ಕೆರಳಿಸುವಂತಿದೆ ಎಂದು ಟೀಕಿಸಿದ್ದಾರೆ. ಕೂಡಲೇ ಅವಳ ವಿಡಿಯೋಗಳನ್ನು ಯೂಟ್ಯೂಬ್ ನಿಂದ ತೆಗೆದುಹಾಕಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

