HomeAutoರ್ಯಾಪಿಡೊ ಬೈಕ್ ಚಲಾಯಿಸುತ್ತಿದ್ದ ಮಹಿಳೆಗೆ ಕಿರುಕುಳ: ಯುವಕನಿಂದ ಅಸಭ್ಯ ವರ್ತನೆ

ರ್ಯಾಪಿಡೊ ಬೈಕ್ ಚಲಾಯಿಸುತ್ತಿದ್ದ ಮಹಿಳೆಗೆ ಕಿರುಕುಳ: ಯುವಕನಿಂದ ಅಸಭ್ಯ ವರ್ತನೆ

ನೆಲಮಂಗಲ: ರ್ಯಾಪಿಡೊ ಬೈಕ್ ಚಲಾಯಿಸುತ್ತಿದ್ದ ಮಹಿಳೆಗೆ ಹಿಂಬದಿ ಕುಳಿತಿದ್ದ ಯುವಕ ಕಿರುಕುಳ ನೀಡಿದ್ದು, ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಹೆಚ್ ಎಂಟಿ ಬಳಿ ನಡೆದಿದೆ.

ಜೈಪುರ ಮೂಲದ ಯುವಕ ಮಹೇಶ್ (27) ಎಂಬಾತ ರ್ಯಾಪಿಡೊ ಬೈಕ್ ಚಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಯುವಕನ ವಿರುದ್ಧ 35 ವರ್ಷದ ಮಹಿಳೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜಾಲಹಳ್ಳಿಯ ಹೆಚ್ ಎಂಟಿಯಿಂದ ದಾಸರಹಳ್ಳಿಗೆ ಬರುವ ಮಾರ್ಗ ಮಧ್ಯೆ ಯುವಕ ಕಿರುಕುಳ ನೀಡಿದ್ದಾನೆ. ತಕ್ಷಣ ಬೈಕ್ ನಿಲ್ಲಿಸಿದ ಮಹಿಳೆ ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular