HomeKarnatakaಅತ್ಯಾಚಾರ ಆರೋಪ : ಶಾಸಕ 'ವಿನಯ್ ಕುಲಕರ್ಣಿ' ವಿರುದ್ಧ ಪ್ರಕರಣ ದಾಖಲು |Vinay Kulakarni

ಅತ್ಯಾಚಾರ ಆರೋಪ : ಶಾಸಕ ‘ವಿನಯ್ ಕುಲಕರ್ಣಿ’ ವಿರುದ್ಧ ಪ್ರಕರಣ ದಾಖಲು |Vinay Kulakarni

ಬೆಂಗಳೂರು : ಅತ್ಯಾಚಾರ ಆರೋಪದ ಹಿನ್ನೆಲೆ ಶಾಸಕ ‘ವಿನಯ್ ಕುಲಕರ್ಣಿ’ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತೆ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ದೂರು ಆಧರಿಸಿ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ರೈತ ಹೋರಾಟ ಹಾಗೂ ಸಾಮಾಜಿಕ ಕಾರ್ಯಕರ್ತೆ ಅತ್ಯಾಚಾರದ ಆರೋಫ ಮಾಡಿದ್ದಾರೆ. ನನಗೆ, 2022ರಲ್ಲಿ ವಿನಯ್ ಕುಲಕರ್ಣಿ ಅವರ ಪರಿಚಯವಾಗಿತ್ತು. ಬಳಿಕ ನನ್ನ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದರು. ಮೊದಲ ಬಾರಿಗೆ ಹೆಬ್ಬಾಳ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದೆ. ರಾತ್ರಿ 11 ಗಂಟೆ ನಂತರ ಕರೆ ಮಾಡಿ ಮೊದಲು ಆರೋಗ್ಯ ವಿಚಾರಿಸುತ್ತಿದ್ದರು. ಮಧ್ಯರಾತ್ರಿ ನಗ್ನವಾಗಿ ವಿಡಿಯೊ ಕರೆ ಮಾಡುತ್ತಿದ್ದರು. ನಾನು ನಿರಾಕರಿಸಿದಾಗ ಬೆದರಿಕೆ ಹಾಕಿಸುತ್ತಿದ್ದರು’ ಎಂದು ಸಂತ್ರಸ್ತೆ ನೀಡಿದ ದೂರು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular