HomeSportsಉಮರ್ ಅಬ್ದುಲ್ಲಾ ಜೊತೆ ರಣಜಿ ಟ್ರೋಫಿ ವೀಕ್ಷಿಸಿದ ಪ್ರಹ್ಲಾದ್ ಜೋಶಿ

ಉಮರ್ ಅಬ್ದುಲ್ಲಾ ಜೊತೆ ರಣಜಿ ಟ್ರೋಫಿ ವೀಕ್ಷಿಸಿದ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ಶನಿವಾರ ಜಮ್ಮು ಮತ್ತು ಕಾಶ್ಮೀರ ತಂಡ ಇತಿಹಾಸ ನಿರ್ಮಾಣ ಮಾಡಿದೆ. ರಣಜಿ ಟ್ರೋಫಿ ಫೈನಲ್‌ನಲ್ಲಿ ತಂಡ ಬಲಿಷ್ಠ ಕರ್ನಾಟಕವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಜಮ್ಮು ಮತ್ತು ಕಾಶ್ಮೀರ ತಂಡ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದಿದೆ.

ರಣಜಿ ಪಂದ್ಯದ ಫೈನಲ್ ನೋಡಲು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶುಕ್ರವಾರ ಸಂಜೆ ಹುಬ್ಬಳ್ಳಿಗೆ ಆಗಮಿಸಿದ್ದರು. ಇಂದು ಜಮ್ಮು ಮತ್ತು ಕಾಶ್ಮೀರ ತಂಡ ಗೆಲ್ಲುವ ಕ್ಷಣವನ್ನು ಅವರು ಕಣ್ತುಂಬಿಕೊಂಡು, ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಪ್ರಹ್ಲಾದ್ ಜೋಶಿ ಭೇಟಿ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಭೇಟಿ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತು ಪೋಸ್ಟ್ ಹಾಕಿರುವ ಅವರು, ‘ನಮ್ಮ ಹುಬ್ಬಳ್ಳಿಯ ರಾಜ್ ನಗರದ KSCA ಮೈದಾನದಲ್ಲಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವೆ ನಡೆದ ರಣಜಿ ಫೈನಲ್ ಪಂದ್ಯವನ್ನು ವೀಕ್ಷಿಸಿದ ಕ್ಷಣಗಳು’

‘‎‎ಪ್ರಥಮ ಬಾರಿಗೆ ರಣಜಿ ಟ್ರೋಫಿ ಜಯಿಸಿದ ಜಮ್ಮು ಕಾಶ್ಮೀರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.  ಅತ್ಯಂತ ಸುಸಜ್ಜಿತವಾಗಿ ರೂಪುಗೊಂಡ ಈ ಕ್ರಿಕೆಟ್ ಕ್ರೀಡಾಂಗಣವು ನಮ್ಮ ಭಾಗದ ಹೆಮ್ಮೆಯಾಗಿದೆ’

‘ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕ್ರೀಡಾಭಿಮಾನಿಗಳ ಸಂಭ್ರಮ, ಆಟಗಾರರ ಹೋರಾಟಮಯ ಪ್ರದರ್ಶನ ಹಾಗೂ ಉತ್ಸಾಹಭರಿತ ವಾತಾವರಣ ಈ ಮಹತ್ವದ ಪಂದ್ಯಕ್ಕೆ ವಿಶಿಷ್ಟ ಮೆರುಗು ನೀಡಿದೆ. ಮೊಟ್ಟ ಮೊದಲಬಾರಿಗೆ ರಣಜಿ ಫೈನಲ್ ಆತಿಥ್ಯ ವಹಿಸಿರುವುದು ನಮ್ಮ ಹುಬ್ಬಳ್ಳಿಗೆ ಹೆಮ್ಮೆಯ ವಿಷಯ’

‎‎’ಕರ್ನಾಟಕ ತಂಡ ಶ್ರೇಷ್ಠ ಹೋರಾಟ ಪ್ರದರ್ಶಿಸಿ ಕ್ರೀಡಾಸ್ಫೂರ್ತಿಗೆ ಮೆರಗು ತಂದಿದೆ. ಇಂತಹ ಪಂದ್ಯಗಳು ಯುವಜನತೆಗೆ ಪ್ರೇರಣೆ ನೀಡಲಿದೆ. ಹುಬ್ಬಳ್ಳಿ ನಗರದ ಕ್ರೀಡಾ ಪರಂಪರೆ ಹಾಗೂ ಅಭಿವೃದ್ಧಿಯ ಸಂಕಲ್ಪಕ್ಕೆ ಈ ರಣಜಿ ಫೈನಲ್ ಪಂದ್ಯವು ಇನ್ನೊಂದು ಸ್ಮರಣೀಯ ಮೈಲಿಗಲ್ಲಾಗಿ ಉಳಿಯಲಿದೆ’ ಎಂದು ಹೇಳಿದ್ದಾರೆ.

‎‎’ಈ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಸಿ.ಎಂ ಶ್ರೀ ಉಮರ್ ಅಬ್ದುಲ್ಲಾ ಸೇರಿದಂತೆ ಗಣ್ಯರು, ಪ್ರಮುಖರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು’ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular