ಬೆಂಗಳೂರು: ಹುಬ್ಬಳ್ಳಿಯ ರಾಜಾ ನಗರದಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಫೆಬ್ರವರಿ 24 ರಿಂದ 28 ರವರೆಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.
ಕರ್ನಾಟಕ ಮತ್ತು ಜಮ್ಮು -ಕಾಶ್ಮೀರ ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಲಕ್ನೋದಲ್ಲಿ ಗುರುವಾರ ಮುಕ್ತಾಯವಾದ ಸೆಮಿಫೈನಲ್ ನಲ್ಲಿ ಕರ್ನಾಟಕ ತಂಡ ಉತ್ತರಾಖಂಡ ಎದುರು ಡ್ರಾ ಮಾಡಿಕೊಂಡಿದೆ. ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ್ದ ಕರ್ನಾಟಕ ಫೈನಲ್ ಪ್ರವೇಶಿಸಿದೆ.
ದೇವದತ್ ಪಡಿಕಲ್ ನೇತೃತ್ವದ ಕರ್ನಾಟಕ ತಂಡ 2015ರ ನಂತರ ಫೈನಲ್ ಪ್ರವೇಶಿಸಿದೆ. ಒಂಬತ್ತನೇ ಪ್ರಶಸ್ತಿಗಾಗಿ ಕರ್ನಾಟಕ ತಂಡ ಹುಬ್ಬಳ್ಳಿಯ ರಾಜಾ ನಗರದಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡದ ಸವಾಲು ಎದುರಿಸಲಿದೆ.

