HomeEntertainmentರಂಜನ್ ಕಾಸರಗೋಡು ಅಭಿನಯದ 'ಆರಾಟ' ಟ್ರೈಲರ್ ರಿಲೀಸ್

ರಂಜನ್ ಕಾಸರಗೋಡು ಅಭಿನಯದ ‘ಆರಾಟ’ ಟ್ರೈಲರ್ ರಿಲೀಸ್

ರಂಜನ್ ಕಾಸರಗೋಡು ನಟನೆಯ ಪುಷ್ಪರಾಜ್ ಮಾಲರ ಬೀಡು ನಿರ್ದೇಶನದ ಬಹುನಿರೀಕ್ಷಿತ ಆರಾಟ ಚಿತ್ರದ ಟ್ರೈಲರ್, ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ನೋಡುಗರಿಂದ ಈ ಟೈಲರ್ ಗೆ ಸಾಕಷ್ಟು ಮೆಚ್ಚುಗೆ  ದೊರೆತಿದೆ.

ಈ ಚಿತ್ರವನ್ನು ಪಿ ಎನ್ ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ರಾಘವೇಂದ್ರ ಹೊಳ್ಳ ಮತ್ತು ರಾಮಪ್ರಸಾದ್ ನಿರ್ಮಾಣ ಮಾಡಿದ್ದು, ರಂಜನ್ ಕಾಸರಗೋಡು ಸೇರಿದಂತೆ ವೆನ್ಯಾ ರೈ, ಜ್ಯೋತಿಶ್ ಶೆಟ್ಟಿ,  ಅನಿಲ್ ರಾಜ್ ಉಪ್ಪಳ, ಸುನಿಲ್ ನೆಲ್ಲಿಗುಡ್ಡೆ , ರವಿ ರಾಮಕುಂಜ, ಚೇತನ್ ರೈ ಮಣಿ, ಸಂದೀಪ್ ಭಕ್ತ, ಉತ್ಸವ್ ವಾಮಂಜೂರು, ನಯನಾ ಸಾಲಿಯಾನ್ ತೆರೆ ಹಂಚಿಕೊಂಡಿದ್ದಾರೆ.  ದಾಮು ಕನ್ಸೂರ್ ಸಂಕಲನ, ರವಿ ಸುವರ್ಣ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular