HomeEntertainmentಶ್ರದ್ಧಾ ದಾಸ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯ್ತು 'ಪಾರಿಜಾತ ಪರ್ವಂ' ಚಿತ್ರದ ಲಿರಿಕಲ್ ಹಾಡು

ಶ್ರದ್ಧಾ ದಾಸ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯ್ತು ‘ಪಾರಿಜಾತ ಪರ್ವಂ’ ಚಿತ್ರದ ಲಿರಿಕಲ್ ಹಾಡು

ತೆಲುಗು ಸೇರಿದಂತೆ ಹಿಂದಿ, ಕನ್ನಡ, ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮಾಡಿಸಿರುವ ಬಹುಭಾಷಾ ನಟಿ ಶ್ರದ್ಧಾ ದಾಸ್ ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳಿಂದ ಮತ್ತು ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಶ್ರದ್ಧಾ ದಾಸ್ ಹುಟ್ಟು ಹಬ್ಬದ ಪ್ರಯುಕ್ತ ಇಂದು ‘ಪಾರಿಜಾತ ಪರ್ವಂ’ ಚಿತ್ರತಂಡ ‘ರಂಗ್ ರಂಗ್ ರಂಗೀಲಾ’ ಲಿರಿಕಲ್ ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದೆ. ಈ ಹಾಡಿಗೆ ಶ್ರದ್ಧಾ ದಾಸ್ ಅವರೇ ಧ್ವನಿಯಾಗಿದ್ದು, ಜೋಗಯ್ಯ ಶಾಸ್ತ್ರಿ ಸಾಹಿತ್ಯವಿದೆ. ಸಂತೋಷ್ ನಿರ್ದೇಶನದ ಈ ಚಿತ್ರದಲ್ಲಿ ಚೈತನ್ಯ ರಾವ್, ಸುನಿಲ್, ಶ್ರದ್ಧಾ ದಾಸ್, ಹರ್ಷ ಚೆಮುಡು, ಶ್ರೀಕಾಂತ್ ಅಯ್ಯಂಗಾರ್ ತೆರೆ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular