HomeLive NewsBIG NEWS: ವಿಪಕ್ಷಗಳ ಗ್ಯಾರಂಟಿ ವಿರೋಧಿ ನೀತಿಗೆ ಅವರ ಪಕ್ಷದ ಶಾಸಕರೇ ತಕ್ಕ ಉತ್ತರ ನೀಡಿದ್ದಾರೆ:...

BIG NEWS: ವಿಪಕ್ಷಗಳ ಗ್ಯಾರಂಟಿ ವಿರೋಧಿ ನೀತಿಗೆ ಅವರ ಪಕ್ಷದ ಶಾಸಕರೇ ತಕ್ಕ ಉತ್ತರ ನೀಡಿದ್ದಾರೆ: ರಣದೀಪ್ ಸುರ್ಜೇವಾಲಾ ಟಾಂಗ್

ಬೆಂಗಳೂರು: ಮೂರು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಜನಪರ ಕೆಲಸಗಳಿಗೆ ಶಾಸಕರು ನೀಡಿರುವ ಬೆಂಬಲ ಈ ಪರಿಷತ್ ಚುನಾವಣೆ ಪಲಿತಾಂಶ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಗ್ಯಾರಂಟಿ ವಿರೋಧಿ ನಿಲುವನ್ನು ಅವರ ಪಕ್ಷದ ಶಾಸಕರೇ ವಿರೋಧಿಸಿ ಸಂದೇಶ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.

ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಗುರುವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳನ್ನು ವಿಧಾನಸೌಧದಲ್ಲಿ ಅಭಿನಂದಿಸಿದರು. ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಬೆಂಬಲ ನೀಡಿದ್ದಾರೆ. ‌ಪಕ್ಷಾತೀತವಾಗಿ ನಮ್ಮ ಜೊತೆ ನಿಂತಿದ್ದಾರೆ. ಇದರ ಜೊತೆಗೆ ಕರ್ನಾಟಕ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕರ್ನಾಟಕದ ಶಾಸಕರು ಪಕ್ಷಾತೀತವಾಗಿ ಉತ್ತರ ನೀಡಿದ್ದಾರೆ. ಕರ್ನಾಟಕದ ಹಕ್ಕುಗಳನ್ನು ಮೊಟಕುಗೊಳಿಸಲು ಆಗಲ್ಲ ‌ಎಂದು ಅವರ ಪಕ್ಷದ ಶಾಸಕರೇ ಉತ್ತರ ನೀಡಿದ್ದಾರೆ ಎಂದರು.

ಮತದ ಮೂಲಕ ಐದು ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ, ಜನತಾದಳದ ಶಾಸಕರೂ ಒಪ್ಪಿಗೆ ಮುದ್ರೆ ಒತ್ತಿದ್ದಾರೆ. ಯಾರೇ ಗ್ಯಾರಂಟಿ ವಿರೋಧಿಸಿದರೂ ನಾವು ಗ್ಯಾರಂಟಿ ಪರವಾಗಿದ್ದೇವೆ ಎಂದು ದನಿ ಎತ್ತಿದ್ದಾರೆ. ಕರ್ನಾಟಕದ ಜನರ ವಿರೋಧಿಯಾದ ಅವರ ನಕಾರಾತ್ಮಕ ರಾಜಕಾರಣ ಅವರಿಗೆ ತಿರುಗಿದೆ. ನಾನು ನನ್ನ ಹೃದಯದಿಂದ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿ.ಕೆ.ಹರಿಪ್ರಸಾದ್ ಅವರು ಸೇರಿದಂತೆ ಬಿ.ಎಸ್.ಶಿವಣ್ಣ, ತಿಪ್ಪಣ್ಣ ಕಮಕನೂರ, ಪಿ.ವಿ.ಮೋಹನ್ ಮತ್ತು ವಿನಯ್ ಕಾರ್ತಿಕ್ ಅವರು ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷವು 11 ಮತಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ನಮ್ಮ ಪಕ್ಷದ ಶಾಸಕರ ಸಂಖ್ಯೆ 135. ಸರ್ವೋದಯ ಪಕ್ಷದ ‌ಒಬ್ಬರು, ಇಬ್ಬರ ಪಕ್ಷೇತರರು ಸೇರಿ 138 ಶಾಸಕರ ಬೆಂಬಲ ನಮಗಿತ್ತು. ನಾವು 151 ಮತಗಳನ್ನು ಪಡೆದಿದ್ದೇವೆ. ಬಿಜೆಪಿಯ 64 ಮತಗಳಲ್ಲಿ ಅವರು 56 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದಿದ್ದಾರೆ. ಒಂದು ಮತವು ತಿರಸ್ಕೃತವಾಗಿದೆ. ಜನತಾದಳದಲ್ಲಿ 18 ಶಾಸಕರಿದ್ದು 14 ಮತಗಳನ್ನು ಅವರ ಅಭ್ಯರ್ಥಿ ಪಡೆದಿದ್ದಾರೆ ಎಂದರು.

ನಮಗೆ ಬೆಂಬಲಿಸಿದ ಕರ್ನಾಟಕದ ಎಲ್ಲಾ ಕನ್ನಡಿಗರಿಗೆ ಹಾಗೂ ನಮಗೆ ಬೆಂಬಲಿಸಿದ ಶಾಸಕರಿಗೆ ಧನ್ಯವಾದಗಳು. ಈ ಗೆಲುವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಹಾಗೂ ಪಕ್ಷದ ಶಾಸಕರು ಮತ್ತು ಎಲ್ಲಾ ನಾಯಕರು, ಕಾರ್ಯಕರ್ತರ ಗೆಲುವು ಎಂದರು.

ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಪಕ್ಷದ ಐದು ಜನ ಅಭ್ಯರ್ಥಿಗಳು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ‌. ಇದು ಕರ್ನಾಟಕದ ಇತಿಹಾಸದಲ್ಲಿಯೇ ಮಹತ್ವದ ದಿನ. ಇತಿಹಾಸ ಮರುಕಳಿಸಿದೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular