HomeEntertainment'ರಣಬಲಿ' ಚಿತ್ರದ ಟೀಸರ್ ರಿಲೀಸ್; ವಿಜಯ್ ದೇವರಕೊಂಡನ ‘ವಿಶ್ವರೂಪ’ಕ್ಕೆ ಫ್ಯಾನ್ಸ್ ಫಿದಾ |WATCH VIDEO

‘ರಣಬಲಿ’ ಚಿತ್ರದ ಟೀಸರ್ ರಿಲೀಸ್; ವಿಜಯ್ ದೇವರಕೊಂಡನ ‘ವಿಶ್ವರೂಪ’ಕ್ಕೆ ಫ್ಯಾನ್ಸ್ ಫಿದಾ |WATCH VIDEO

ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಸಿಕ್ಕಿದೆ. ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ಬಹುನಿರೀಕ್ಷಿತ ‘ರಣಬಲಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ವಿಜಯ್ ದೇವರಕೊಂಡ ಅವರು ‘ಶಿಂಗನಮಲ ಬೊಬ್ಬಿಲಿ ರಣಬಲಿ’ ಪಾತ್ರದಲ್ಲಿ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ರಾಯಲಸೀಮೆಯ ಬರಗಾಲ ಮತ್ತು ನಿರಂಕುಶ ಆಡಳಿತದ ವಿರುದ್ಧದ ಬಂಡಾಯದ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ.

ರೌಡಿ ಬಾಯ್ ವಿಜಯ್ ದೇವರಕೊಂಡ ನಾಯಕನಾಗಿ ಹಾಗೂ ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಣಬಲಿ’ ಸಿನಿಮಾದ ಬಗ್ಗೆ ಈಗಾಗಲೇ ಭಾರಿ ನಿರೀಕ್ಷೆಗಳಿವೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಿಡುಗಡೆಯಾದ ‘ಟ್ಯಾಕ್ಸೀವಾಲಾ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿತ್ತು.

ಹೀಗಾಗಿ ‘ರಣಬಲಿ’ ಚಿತ್ರದ ಮೇಲೂ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಈ ಸಿನಿಮಾ ರಾಯಲಸೀಮೆಯ ಹಿನ್ನೆಲೆಯಲ್ಲಿದ್ದು, 1854ರಿಂದ 1878ರ ಅವಧಿಯಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಡುಗಡೆಯಾದ ‘ರಣಬಲಿ’ ಟೀಸರ್

ಇದೀಗ ‘ರಣಬಲಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. 2 ನಿಮಿಷ 32 ಸೆಕೆಂಡ್‌ಗಳ ಈ ಟೀಸರ್ ಸಾಕಷ್ಟು ರೋಚಕವಾಗಿದ್ದು, ವಿಜಯ್ ದೇವರಕೊಂಡ ಅವರ ವಿಭಿನ್ನ ಹಾಗೂ ಶಕ್ತಿಶಾಲಿ ಪಾತ್ರದ ಝಲಕ್ ತೋರಿಸಿದೆ.

ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ‘ಶಿಂಗನಮಲ ಬೊಬ್ಬಿಲಿ ರಣಬಲಿ’ ಎಂಬ ಪ್ರಭಾವಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ, “ಇದು ಅನ್ನಪೂರ್ಣ ದೇಶವಲ್ಲವಾ? ಅನ್ನಕ್ಕೂ ಬರ ಬಂದಿದೆ…” ಎಂಬ ಅರ್ಥದ ಸಂಭಾಷಣೆಗಳು ಗಮನ ಸೆಳೆಯುತ್ತವೆ.ಅದೇ ರೀತಿ, “ಇದೆಲ್ಲವೂ ನಮ್ಮ ಭೂಮಿಯನ್ನು ನುಂಗಲು ಏಳು ಸಮುದ್ರ ದಾಟಿ ಬಂದ ಆ ಕ್ರೂರ ರಾಕ್ಷಸನ ಹಸಿವು” ಎಂಬ ಡೈಲಾಗ್ ಕೂಡ ಪ್ರೇಕ್ಷಕರ ಗಮನ ಸೆಳೆದಿದೆ.

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ

ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇವರಿಬ್ಬರ ಜೋಡಿಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.‘ರಣಬಲಿ’ ಸಿನಿಮಾ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ.ಚಿತ್ರದಲ್ಲಿ ಹಾಲಿವುಡ್‌ನ ಖ್ಯಾತ ಅಮೆರಿಕನ್ ನಟ ಆರ್ನಾಲ್ಡ್ ವೋಸ್ಲೂ ಖಳನಾಯಕನಾಗಿ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಯಲಸೀಮೆಯ ಬರದ ಹಿನ್ನೆಲೆಯ ಕಥೆ

ರಾಯಲಸೀಮೆಯ ಭೀಕರ ಬರದ ಹಿನ್ನೆಲೆಯಲ್ಲೇ ‘ರಣಬಲಿ’ ಚಿತ್ರದ ಕಥೆ ಸಾಗಲಿದೆ ಎಂದು ನಿರ್ದೇಶಕ ರಾಹುಲ್ ಸಾಂಕೃತ್ಯಾಯನ್ ಈ ಹಿಂದೆ ತಿಳಿಸಿದ್ದರು.ರಾಯಲಸೀಮೆಯಲ್ಲಿ ನಡೆಯುತ್ತಿದ್ದ ನಿರಂಕುಶ ಆಡಳಿತದ ವಿರುದ್ಧ ಬಂಡಾಯ ಎದ್ದ ಒಬ್ಬ ಯೋಧನ ಕಥೆಯೇ ‘ರಣಬಲಿ’ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ

ಟಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ವೈ. ರವಿಶಂಕರ್ ಹಾಗೂ ನವೀನ್ ಯೆರ್ನೇನಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ.

ಟೀಸರ್ ನೋಡಿದ ಬಳಿಕ ವಿಜಯ್ ದೇವರಕೊಂಡ ಅವರ ವೃತ್ತಿಜೀವನದಲ್ಲಿ ‘ರಣಬಲಿ’ ದೊಡ್ಡ ಹಿಟ್ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

https://youtu.be/L7qEKA-e2qI

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular