HomeEntertainmentಉತ್ತರ ಅಮೆರಿಕದಲ್ಲಿ 'ರಣಬಾಲಿ' ಹವಾ: ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ 175 ಕೆ ಡಾಲರ್ ಗಳಿಕೆ!

ಉತ್ತರ ಅಮೆರಿಕದಲ್ಲಿ ‘ರಣಬಾಲಿ’ ಹವಾ: ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ 175 ಕೆ ಡಾಲರ್ ಗಳಿಕೆ!

ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 16 ರಂದು ಸಿನಿಮಾ ತೆರೆಕಾಣಲಿದ್ದು, ಬಿಡುಗಡೆಗೂ ಮುನ್ನ ಆಯೋಜಿಸಲಾಗಿದ್ದ ಅದ್ಧೂರಿ ಪ್ರೀ-ರಿಲೀಸ್ ಕಾರ್ಯಕ್ರಮದ ಬಳಿಕ ವಿದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರ ಅಮೆರಿಕದಲ್ಲಿ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ತೀವ್ರ ವೇಗ ಪಡೆದುಕೊಂಡಿದೆ.

ವಿದೇಶಿ ವಿತರಕರು ನೀಡಿರುವ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಉತ್ತರ ಅಮೆರಿಕದ ಪ್ರೀ-ಸೇಲ್ಸ್ ಒಂದರಲ್ಲೇ ಬರೋಬ್ಬರಿ $75K ಹೆಚ್ಚಳವಾಗಿದ್ದು, ಒಟ್ಟು ಗಳಿಕೆ $175K ತಲುಪಿದೆ. ಪ್ರಮುಖ ಹಾಗೂ ಜನಪ್ರಿಯ ನಟರ ಚಲನಚಿತ್ರಕ್ಕೆ ಹೋಲಿಸಿದರೆ ಈ ಸಂಖ್ಯೆ ಇನ್ನು ಹೆಚ್ಚಾಗಬೇಕಿದ್ದರೂ, ಪ್ರೀ-ರಿಲೀಸ್ ಈವೆಂಟ್ ಬಳಿಕ ವೀಕ್ಷಕರಲ್ಲಿ ಕುತೂಹಲ ದುಪ್ಪಟ್ಟಾಗಿರುವುದು ಪ್ರೀ-ಸೇಲ್ಸ್ ಜಂಪ್‌ನಲ್ಲಿ ಕಂಡುಬರುತ್ತಿದೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಹಾಗೂ ರವಿಶಂಕರ್ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್-ಅತುಲ್ ಜೋಡಿ ಸಂಗೀತ ನೀಡಿದೆ. ಅಭಿಮಾನಿಗಳಲ್ಲಿ ಹಾಗೂ ಸಿನಿಪ್ರಿಯರಲ್ಲಿ ಉತ್ತಮ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಬಿಡುಗಡೆಯ ವೇಳೆಗೆ ಬಾಕ್ಸ್ ಆಫೀಸ್‌ನಲ್ಲಿ ಇನ್ನಷ್ಟು ವೇಗ ಪಡೆದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular