HomeKarnatakaBIG NEWS: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ; ಶಂಕಿತನ ಜಾಡು ಪತ್ತೆ ಮಾಡಿದ ಪೊಲೀಸರು; ಬಿಎಂಟಿಸಿ...

BIG NEWS: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ; ಶಂಕಿತನ ಜಾಡು ಪತ್ತೆ ಮಾಡಿದ ಪೊಲೀಸರು; ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ್ದ ಆರೋಪಿ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶಂಕಿತ ಜಾಡು ಪತ್ತೆ ಮಾಡಿದ್ದಾರೆ.

ಶಂಕಿತ ಬಿಎಂಟಿಸಿ ವೋಲ್ವೋ ಬಸ್ ನಲ್ಲಿ ಪ್ರಯಾಣಿಸಿದ್ದ. ಬನಶಂಕರಿಯಿಂದ ಐಟಿಪಿಎಲ್ (ಸಿಲ್ಕ್ ಬೋರ್ಡ್) ಮಾರ್ಗದಲ್ಲಿ ಹೋಗುವ ಬಸ್ ನಲ್ಲಿ ಹೋಗಿದ್ದಾನೆ. ಬಳಿಕ ಕುಂದಲಹಳ್ಳಿ ಬಳಿ ಇಳಿದು ಕುಂದಲಹಳ್ಳಿಯಿಂದ ಮತ್ತೆ ಬಸ್ ನಲ್ಲಿ ಸಿಎಂಆರ್ ಐಟಿ ಕಾಲೇಜು ಸ್ಟಾಪ್ ನಲ್ಲಿ ಇಳಿದುಕೊಂಡಿದ್ದಾನೆ. ಅಲ್ಲಿಂದ ನಡೆದು ಫೋನಿನಲ್ಲಿ ಮಾತನಾಡುತ್ತ ರಾಮೇಶ್ವರಂ ಕೆಫೆ ಹೋಟೆಲ್ ಗೆ ಹೋಗಿ ರವೆ ಇಡ್ಲಿ ಆರ್ಡರ್ ಮಾಡಿದ್ದಾನೆ.

ಶಂಕಿತ ಬಸ್ ನಲ್ಲಿ ಪ್ರಯಾಣಿಸಿ ಹೋಟೆಲ್ ಗೆ ಬದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಶಂಕಿತನನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಶೋಧಕಾರ್ಯ ಚುರುಕುಗೊಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular