HomeKarnatakaBIG NEWS: ಬೆಚ್ಚಿ ಬಿಳಿಸುವಂತಿದೆ ಶಂಕಿತನ ಟ್ರಾವೆಲ್ ಹಿಸ್ಟ್ರಿ; ಬೆಂಗಳೂರಿನಿಂದ ಹುಮ್ನಾಬಾದ್ ಗೆ ತೆರಳಿರುವ ಶಂಕೆ

BIG NEWS: ಬೆಚ್ಚಿ ಬಿಳಿಸುವಂತಿದೆ ಶಂಕಿತನ ಟ್ರಾವೆಲ್ ಹಿಸ್ಟ್ರಿ; ಬೆಂಗಳೂರಿನಿಂದ ಹುಮ್ನಾಬಾದ್ ಗೆ ತೆರಳಿರುವ ಶಂಕೆ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೊಟ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಹಾಗೂ ಎನ್ ಐಎ ಅಧಿಕಾರುಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ನಡುವೆ ಶಂಕಿತನ ಟ್ರಾವಲ್ ಹಿಸ್ಟ್ರ‍ಿ ಹಲವು ಸುಳಿವು ನೀಡಿದ್ದು, ಬೆಚ್ಚಿ ಬೀಳಿಸುವಂತಿದೆ.

ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದ ಬಳಿಕ ಶಂಕಿತ ಎತ್ತಕಡೆಯಿಂದ ಪರಾರಿಯಾಗಿದ್ದಾನೆ ಎಂಬುದೇ ತಿಳಿದುಬಂದಿರಲಿಲ್ಲ. ಇದೀಗ ಅಂದು 4:30ಕ್ಕೆ ಬಸ್ ಒಂದರಲ್ಲಿ ಕಾಣಿಸಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗೊರಗುಂಟೆ ಪಾಳ್ಯದ ಬಳಿ ಶಂಕಿತ ಕೆ ಎಸ್ ಆರ್ ಟಿಸಿ ಬಸ್ ಹತ್ತಿರುವ ಬಗ್ಗೆ ಸುಳಿವು ಲಭ್ಯವಾಗಿದೆ. ಬೆಂಗಳೂರಿನಿಂದ ಹುಮ್ನಾಬಾದ್ ಗೆ ತೆರಳುವ ಬಸ್ ಹತ್ತಿರುವ ಶಂಕಿತ ಹುಮ್ನಾಬಾದ್ ಗೆ ತೆರಳಿರುವ ಸಾಧ್ಯತೆ ಇದೆ. KA 38 F 1235 ಸಂಖ್ಯೆಯ ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಆತ ಪ್ರಯಾಣಿಸಿದ್ದಾನೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular