HomeLatest Newsಪುಕ್ಸಟ್ಟೆ ಭಾಗ್ಯಗಳಿಂದ ಜನ ಸೋಮಾರಿ, ಬದುಕು ಉಜ್ವಲವಾಗಲ್ಲ: ಗ್ಯಾರಂಟಿ ಯೋಜನೆಗಳ ಬಗ್ಗೆ ರಂಭಾಪುರಿ ಶ್ರೀ ಟೀಕೆ

ಪುಕ್ಸಟ್ಟೆ ಭಾಗ್ಯಗಳಿಂದ ಜನ ಸೋಮಾರಿ, ಬದುಕು ಉಜ್ವಲವಾಗಲ್ಲ: ಗ್ಯಾರಂಟಿ ಯೋಜನೆಗಳ ಬಗ್ಗೆ ರಂಭಾಪುರಿ ಶ್ರೀ ಟೀಕೆ

ಬೆಳಗಾವಿ: ಇಂದಿನ ಸರ್ಕಾರಗಳು ನೀಡುತ್ತಿರುವ ಪುಕ್ಸಟ್ಟೆ ಭಾಗ್ಯಗಳಿಂದ ಜನ ಸೋಮಾರಿಗಳಾಗುತ್ತಿದ್ದಾರೆ. ಸರ್ಕಾರಗಳು ಕೊಡುತ್ತಿರುವ ಇಂತಹ ಬಿಟ್ಟಿ ಭಾಗ್ಯ ಯೋಜನೆಗಳಿಂದ ಜನರ ಬದುಕು ಉಜ್ವಲವಾಗುವುದಿಲ್ಲ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸಿದ್ದಾರೆ.

ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲೂಕಿನ ಚಿಕ್ಬಲಕಟ್ಟೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುಕ್ಸಟ್ಟೆ ಸ್ಕೀಮ್ ನಿಂದ ಜನರಲ್ಲಿ ದುಡಿಯುವ ಮನೋಭಾವ ಕ್ಷೀಣಿಸಿದೆ. ಸೋಮಾರಿತನ ಹೆಚ್ಚಳವಾಗುತ್ತಿರುವುದು ಬೇಸರದ ವಿಷಯವಾಗಿದೆ. ದೇಶದಲ್ಲಿ ರೈತ ಹಾಗೂ ಯೋಧ ಎರಡು ಕಣ್ಣುಗಳಿದ್ದಂತೆ. ಯೋಧರು ದೇಶ ಕಾಯ್ದರೆ ರೈತರು ನಮಗೆ ಅನ್ನ ನೀಡುತ್ತಾರೆ. ಕಷ್ಟಪಟ್ಟು ದುಡಿದರೆ ಭೂತಾಯಿ ನಮ್ಮನೆಂದು ಕೈಬಿಡುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular