HomeKarnatakaBREAKING: ಯುವತಿಗೆ ಚಾಕು ಇರಿದು ಅಪಹರಣ; ಕಾರ್ ಚೇಸ್ ಮಾಡಿ ಆರೋಪಿ ಯುವಕನನ್ನು ಬಂಧಿಸಿದ ಪೊಲೀಸರು

BREAKING: ಯುವತಿಗೆ ಚಾಕು ಇರಿದು ಅಪಹರಣ; ಕಾರ್ ಚೇಸ್ ಮಾಡಿ ಆರೋಪಿ ಯುವಕನನ್ನು ಬಂಧಿಸಿದ ಪೊಲೀಸರು

ರಾಮನಗರ: ಅಪ್ರಾಪ್ತ ಯುವತಿಗೆ ಚಾಕು ಇರಿದು ಬಳಿಕ ಆಕೆಯನ್ನು ಅಪಹರಿಸಿದ್ದ ದುಷ್ಕರ್ಮಿಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.

ರಾಮನಗರದ ಐಬಿ ರಸ್ತೆಯಲ್ಲಿರುವ ಜ್ಯೂನಿಯರ್ ಕಾಲೇಜು ಬಳಿ ಇಂದು ಬೆಳಿಗ್ಗೆ ಇನೋವಾ ಕಾರಿನಲ್ಲಿ ಬಂದ ದುಷ್ಕರ್ಮಿ ಯುವತಿಗೆ ಚಾಕು ಇರಿದು, ಆಕೆಯನ್ನು ಕಿಡ್ನ್ಯಾಪ್ ಮಾಡಿ ಪರಾರಿಯಾಗಿದ್ದ.

ಅಪಹರಣವನ್ನು ತಪ್ಪಿಸಲು ಸ್ಥಳೀಯರು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಪಹರಣಕಾರನ ಕಾರನ್ನು ಬೆನ್ನಟ್ಟಿ ಹೋಗಿ ಆತನನ್ನು ಬಂಧಿಸಿ, ಯುವತಿಯನ್ನು ರಕ್ಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಾಕು ಇರಿತದಿಂದ ಹಲ್ಲೆಗೊಳಗಾದ ಯುವತಿ ಸಂಜನಾಳನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular