HomeKarnatakaಕಾರಿನಲ್ಲಿಯೇ ಶವವಾಗಿ ಪತ್ತೆಯಾದ ಕ್ಯಾಬ್ ಚಾಲಕ: ಹೃದಯಾಘಾತದಿಂದ ಸಾವು ಶಂಕೆ

ಕಾರಿನಲ್ಲಿಯೇ ಶವವಾಗಿ ಪತ್ತೆಯಾದ ಕ್ಯಾಬ್ ಚಾಲಕ: ಹೃದಯಾಘಾತದಿಂದ ಸಾವು ಶಂಕೆ

ರಾಮನಗರ: ಕ್ಯಾಬ್ ಚಾಲಕರೊಬ್ಬರು ತಮ್ಮದೇ ಕ್ಯಾಬ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಚಂದ್ರಪ್ಪ ಸರ್ಕಲ್ ಬಳಿ ನಿಂತಿದ್ದ ಕಾರಿನಲ್ಲಿಯೇ ಚಾಲಕ ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರಿನ ಕೆ.ಪಿ.ಅಗ್ರಹಾರ ಮೂಲದ ಪುಷ್ಟರಾಜ್ (29) ಮೃತಪಟ್ಟ ಕ್ಯಾಬ್ ಚಾಲಕ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪುಷ್ಪರಾಜ್ ಗ್ರಾಹಕರನ್ನು ತಾವರೆಕೆರೆ ವ್ಯಾಪ್ತಿಗೆ ಡ್ರಾಪ್ ಮಾಡಿದ ನಂತರ, ಚಂದ್ರಪ್ಪ ಸರ್ಕಲ್ ಸಮೀಪದ ಲೇಔಟ್ ಒಂದರಲ್ಲಿ ಕಾರು ಪಾರ್ಕ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಬೆಳಿಗ್ಗೆಯಿಂದಲೂ ಕಾರು ಒಂದೇ ಸ್ಥಳದಲ್ಲಿ ನಿಂತಿರುವುದನ್ನು ಕಂಡ ಸ್ಥಳೀಯರು ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾರಿನೊಳಗೆ ಚಾಲಕ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular