ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಫಾಅರ್ಮ್ -7 ದುರುಪಯೋಗಪಡಿಸಿಕೊಂಡು ಮತದಾರರ ಹೆಸರುಗಳನ್ನು ಡಿಲಿಟ್ ಮಾಡಲಾಗಿದೆ ಎಂಬ ಆರೋಪವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಳ್ಳಿ ಹಾಕಿದ್ದಾರೆ. ಫಾರ್ಮ್ -7 ಮೂಲಕ ಯಾಅವುದೇ ಮತದಾರರ ಹೆಸರನ್ನು ಅಕ್ರಮವಾಗಿ ತೆಗೆದು ಹಾಕಿಲ್ಲ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್, ಯಾವುದೇ ಮತದಾರರ ಹೆಸರನ್ನ ಡಿಲೀಟ್ ಮಾಡುವಂತೆ ಅಕ್ಷೇಪಣೆ ಸಲ್ಲಿಕೆ ಮಾಡಿದ್ರೆ, ತಕ್ಷಣ ಡಿಲೀಟ್ ಮಾಡುವುದಿಲ್ಲ. ಮೊದಲು ಸಂಬಂಧಪಟ್ಟ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಈವರೆಗೆ 91,278 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿವೆ. ಆದ್ರೆ ಇದರಿಂದ ಯಾವುದೇ ಮತದಾರರ ಹೆಸರನ್ನ ಡಿಲೀಟ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ರಾಜ್ಯದಲ್ಲಿ 43,82,313 ಜನರ ಪೈಕಿ 43,55,818 ಜನರಿಗೆ ನೋಟಿಸ್ ನೀಡಲಾಗಿದೆ. ಇನ್ನೂ 26,495 ನೋಟಿಸ್ ಬಾಕಿಯಿದ್ದು, 36,89,063 ನೋಟಿಸ್ ವಿಚಾರಣೆ ಪೂರ್ಣಗೊಂಡಿದೆ. 6,66,755 ನೋಟಿಸ್ ವಿಚಾರಣೆ ಬಾಕಿಯಿದೆ. ಬಿಎಲ್ಓಗಳು ಮನೆಮನೆಗೆ ಹೋಗುತ್ತಿದ್ದು, ಈ ತಿಂಗಳ 12ರ ಒಳಗೆ ವಿಚಾರಣೆ ಪೂರ್ಣಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 9,10,732- ಫಾರ್ಮ್ – 6 ಬಂದಿದೆ. 91,278 – ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿವೆ. ಸೆಪ್ಟೆಂಬರ್ 23ರ ವರೆಗೆ 58,220 ಫಾರ್ಮ್-7 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದ್ರೆ ಅ.4ರ ವರೆಗೆ 91,278 – ಫಾರ್ಮ್ -7 ಅರ್ಜಿ ಸಲ್ಲಿಕೆಯಾಗಿವೆ. ಅ.27 ರಂದು ಅಂತಿಮ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಫಾರ್ಮ್-7 ನಲ್ಲಿ ಸಲ್ಲಿಕೆಯಾಗಿರೋ 91,278 ಅರ್ಜಿಗಳ ಪೈಕಿ ಎಷ್ಟರಲ್ಲಿ ನೈಜ್ಯತೆ ಎಷ್ಟಿದೆ ಅನ್ನೋದನ್ನ ನಾವು ಇನ್ನೂ ಪ್ರತ್ಯೇಕಗೊಳಿಸಿಲ್ಲ. ಆದ್ರೇ ಸ್ಥಳೀಯ ಇಆರ್ಓಗಳು ಕ್ರಮ ಕೈಗೊಳ್ಳುತ್ತಾರೆ. ಅ.27ರ ಬಳಿಕ ಅಂತಿಮ ಮತದಾರರ ಪಟ್ಟಿಯನ್ನ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಪ್ರಿಂಟೆಂಡ್ ಹಾಗೂ ಸಾಫ್ಟ್ ಕಾಪಿ ಕಳಿಸುತ್ತೇವೆ. ಹಳೇ ಮತದಾರರ ಪಟ್ಟಿ ಹಾಗೂ ಹೊಸ ಎಸ್ಐಆರ್ ಪಟ್ಟಿಯನ್ನ ಹೋಲಿಕೆ ಮಾಡಿ ನಾವು ಮತ್ತೆ ಮತದಾರರ ಸೇರ್ಪಡೆಗೆ ಸ್ಪೆಷಲ್ ಡ್ರೈವ್ ಮಾಡುತ್ತೇವೆ
ಫಾರ್ಮ್ -6ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೇಂದ್ರ ಚುನಾವಣಾ ಆಯೋಗ ಇನ್ನೊಂದು ಸ್ಪೆಷಲ್ ಡ್ರೈವ್ ಮಾಡೋಕೆ ಹೇಳಿದೆ. ಈ ಸೂಚನೆಯ ಬಗ್ಗೆ ರಾಜಕೀಯ ಪಕ್ಷದವರಿಗೂ ತಿಳಿಸಲಾಗಿದೆ, ಇಆರ್ಓಗಳಿಗೂ ಮಾಹಿತಿ ನೀಡಲಾಗಿದ್ದು, ರೂಪುರೇಷೆ ತಯಾರು ಮಾಡುತ್ತೇವೆ. ಅ.22ರ ನಂತರ ಸ್ಪೆಷಲ್ ಡ್ರೈವ್ ಮೂಲಕ ಇನ್ನೂ ಯಾರಾದ್ರೂ ಅರ್ಹ ಮತದಾರರು ಬಿಟ್ಟು ಹೋಗಿದ್ರೆ ಅವರನ್ನ ಸೇರಿಸುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರಲ್ಲದೇ, ಕರ್ನಾಟಕದ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗಿದ್ದರೆ ಫಾರ್ಮ್ – 6 ಅಪ್ಲೈ ಮಾಡಿ ಎಂದು ಮನವಿ ಮಾಡಿದ್ದಾರೆ.

