HomeIndiaಅತ್ಯಾಚಾರ ಆರೋಪಿ ಗುರ್ಮೀತ್ ರಾಮ್ ರಹೀಮ್ ಗೆ ಮತ್ತೆ ಪೆರೋಲ್: 3 ವರ್ಷಗಳಲ್ಲಿ 8 ನೇ...

ಅತ್ಯಾಚಾರ ಆರೋಪಿ ಗುರ್ಮೀತ್ ರಾಮ್ ರಹೀಮ್ ಗೆ ಮತ್ತೆ ಪೆರೋಲ್: 3 ವರ್ಷಗಳಲ್ಲಿ 8 ನೇ ಬಾರಿ ಬಿಡುಗಡೆ

ಚಂಡೀಗಢ: ಡೇರಾ ಸಚ್ಚಾ ಸೌಧದ ಮುಖ್ಯಸ್ಥ, ಅತ್ಯಾಚಾರ ಆರೋಪಿ ಗುರ್ಮೀತ್ ರಾಮ್ ರಹೀಮ್‌ ಗೆ 21 ದಿನಗಳ ಪೆರೋಲ್ ವಿಸ್ತರಣೆಗೆ ಹರಿಯಾಣ ಸರ್ಕಾರ ಅನುಮೋದನೆ ನೀಡಿದೆ.

ಗುರ್ಮಿತ್ ಪ್ರಸ್ತುತ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಎರಡು ವಿಭಿನ್ನ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾರೆ. ಈ  ಪೆರೋಲ್ ಅನುಮೋದನೆಯು 21 ತಿಂಗಳ ಅವಧಿಯಲ್ಲಿ ಅವರ ಆರನೇ ತಾತ್ಕಾಲಿಕ ಬಿಡುಗಡೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2017 ರಲ್ಲಿ ಗುರ್ಮೀತ್ ರಾಮ್ ರಹೀಮ್ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

3 ವರ್ಷಗಳಲ್ಲಿ 8ನೇ ಪೆರೋಲ್

ಈ ವರ್ಷ ಜುಲೈ 20 ರಂದು 30 ದಿನಗಳ ಕಾಲ ಗುರ್ಮೀತ್ ರಾಮ್ ರಹೀಮ್‌ ಗೆ ಕೊನೆಯ ಪೆರೋಲ್ ನೀಡಲಾಯಿತು. ಅತ್ಯಾಚಾರ ಮತ್ತು ಕೊಲೆ ಅಪರಾಧಿ ಆಗಸ್ಟ್ 15 ರಂದು ತನ್ನ ಜನ್ಮದಿನದಂದು ಪೆರೋಲ್‌ನಲ್ಲಿ ಹೊರಬಂದು ಮತ್ತು ಬಾಗ್‌ ಪತ್‌ ನ ಬರ್ವಾನಾದಲ್ಲಿರುವ ತನ್ನ ಆಶ್ರಮದಲ್ಲಿ ತಂಗಿದ್ದ.

ಕಳೆದ 20 ತಿಂಗಳಲ್ಲಿ ಇದು ಆರನೇ ಬಾರಿ ಮತ್ತು ಒಂದು ವರ್ಷದೊಳಗೆ ನಾಲ್ಕನೇ ಬಾರಿಗೆ ರಾಮ್ ರಹೀಮ್‌ಗೆ ಪೆರೋಲ್ ನೀಡಲಾಗಿದೆ. ಇದಕ್ಕೂ ಮೊದಲು, ಹರಿಯಾಣ ಪಂಚಾಯತ್ ಚುನಾವಣೆ ಮತ್ತು ಆದಂಪುರ ವಿಧಾನಸಭಾ ಉಪಚುನಾವಣೆಗೆ ಮುಂಚಿತವಾಗಿ ಅವರನ್ನು ಅಕ್ಟೋಬರ್ 2022 ರಲ್ಲಿ 40 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಅವರು ಅಕ್ಟೋಬರ್ 24, 2020 ರಲ್ಲಿ ಮೊದಲ ಬಾರಿಗೆ ಪೆರೋಲ್ ಪಡೆದಿದ್ದರು ಮತ್ತು 38 ತಿಂಗಳುಗಳು ಅಥವಾ ಮೂರು ವರ್ಷಗಳಲ್ಲಿ ಅವರಿಗೆ ಪೆರೋಲ್ ನೀಡಿರುವುದು ಎಂಟನೇ ಬಾರಿಯಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular