ದಕ್ಷಿಣ ಭಾರತ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ರಕುಲ್ ಪ್ರೀತ್ ಸಿಂಗ್, ಸದ್ಯ ತಮ್ಮ ಗ್ಲಾಮರಸ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಸಕ್ರಿಯರಾಗಿರುವ ರಕುಲ್, ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.
2014ರಲ್ಲಿ ‘ಯಾರಿಯಾನ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ರಕುಲ್, ನಂತರ ‘ದೇ ದೇ ಪ್ಯಾರ್ ದೇ’, ‘ರನ್‌ವೇ 34’ ಮತ್ತು ‘ಡಾಕ್ಟರ್ ಜಿ’ ಅಂತಹ ಸಿನಿಮಾಗಳ ಮೂಲಕ ಹಿಂದಿ ಚಿತ್ರರಂಗದಲ್ಲೂ ಭದ್ರವಾಗಿ ನೆಲೆವೂರಿದ್ದಾರೆ. ಕಮರ್ಷಿಯಲ್ ಚಿತ್ರಗಳ ಜೊತೆಗೆ ಗಂಭೀರ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ನಟಿ ಎಂಬ ಹೆಸರು ಇವರಿಗಿದೆ. ಅದರಲ್ಲೂ 2025ರಲ್ಲಿ ತೆರೆಕಂಡ ‘ದೇ ದೇ ಪ್ಯಾರ್ ದೇ 2’ ಚಿತ್ರದ ಯಶಸ್ಸು ಇವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಇತ್ತೀಚಿನ ಫೋಟೋಶೂಟ್‌ನಲ್ಲಿ ರಕುಲ್ ಅತ್ಯಂತ ಆಧುನಿಕ ಮತ್ತು ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಸೀಕ್ವಿನ್ಡ್ ಕಾರ್ಸೆಟ್ ಮತ್ತು ಗ್ಲಾಸಿ ವ್ರ್ಯಾಪ್ ಸ್ಕರ್ಟ್ ಧರಿಸಿರುವ ಅವರು, ಕ್ಯಾಮೆರಾ ಕಣ್ಣಿಗೆ ತುಂಬಾ ಶಾರ್ಪ್ ಆಗಿ ಪೋಸ್ ನೀಡಿದ್ದಾರೆ. ಮೈಬಣ್ಣಕ್ಕೆ ಒಪ್ಪುವಂತಹ ಬಾಡಿ-ಹಗ್ಗಿಂಗ್ ಉಡುಪಿನಲ್ಲಿ ರಕುಲ್ ಅವರ ಆತ್ಮವಿಶ್ವಾಸ ಎದ್ದು ಕಾಣುತ್ತಿದ್ದು, ಈ ಫೋಟೋಗಳು ಈಗ ಅಭಿಮಾನಿಗಳ ನಿದ್ದೆ ಗೆಡಿಸಿವೆ. ಸಾಂಪ್ರದಾಯಿಕ ಉಡುಗೆಯಿರಲಿ ಅಥವಾ ಮಾಡರ್ನ್ ಲುಕ್ ಇರಲಿ, ರಕುಲ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ.



