HomeEntertainmentಹಲ್ ಚಲ್ ಸೃಷ್ಟಿಸಿದ ಸೂಪರ್ ಸ್ಟಾರ್ ರಜನಿ –ಸೆಂಚುರಿ ಸ್ಟಾರ್ ಶಿವಣ್ಣ 'ಜೈಲರ್' ಪೋಸ್ಟರ್

ಹಲ್ ಚಲ್ ಸೃಷ್ಟಿಸಿದ ಸೂಪರ್ ಸ್ಟಾರ್ ರಜನಿ –ಸೆಂಚುರಿ ಸ್ಟಾರ್ ಶಿವಣ್ಣ ‘ಜೈಲರ್’ ಪೋಸ್ಟರ್

ಸೂಪರ್‌ ಸ್ಟಾರ್ ರಜನಿಕಾಂತ್ ಅವರ ಆಕ್ಷನ್ ಥ್ರಿಲ್ಲರ್ ‘ಜೈಲರ್’ ಆ. 4 ರಂದು ತೆರೆಗೆ ಬರಲಿದೆ. ರಜನಿಕಾಂತ್ ನಿವೃತ್ತ ಪೋಲೀಸ್ ಮತ್ತು ಜೈಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೊಸ ಪೋಸ್ಟರ್‌ನಲ್ಲಿ, ರಜನಿಕಾಂತ್ ಮತ್ತು ಶಿವ ರಾಜ್‌ಕುಮಾರ್ ಒಂದೇ ಕಪ್ಪು ಮತ್ತು ಬಿಳಿ ಚೌಕಟ್ಟಿನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಪೋಸ್ಟರ್ ಸನ್ ಪಿಕ್ಚರ್‌ ನ ‘ಎಕ್ಸ್’ ಹ್ಯಾಂಡಲ್‌ ನಲ್ಲಿ ಸೂಪರ್ ಸ್ಟಾರ್ – ಶಿವಣ್ಣ ಎಂಬ ಶೀರ್ಷಿಕೆಯೊಂದಿಗೆ ಹೊರಬಂದಿದೆ. ಮೊದಲ ಬಾರಿಗೆ ಅವರನ್ನು ಒಟ್ಟಿಗೆ ವೀಕ್ಷಿಸಲು ಸಿದ್ಧರಾಗಿ. ಜೈಲರ್‌ಗೆ ಇನ್ನೂ 4 ದಿನಗಳು ಎಂದು ಟ್ವೀಟ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಜೈಲರ್’ ಚಿತ್ರದ ಟ್ರೇಲರ್‌ನಲ್ಲಿ ರಜನಿಕಾಂತ್ ಸಂಪೂರ್ಣ ‘ಕಬಾಲಿ’ ಮೋಡ್‌ ನಲ್ಲಿ ಕಾಣಿಸಿದ್ದಾರೆ, ಚಿತ್ರದಲ್ಲಿ ಶಿವರಾಜ್‌ ಕುಮಾರ್ ನರಸಿಂಹ ಪಾತ್ರವನ್ನು ನಿರ್ವಹಿಸಿದರೆ, ಮೋಹನ್ ಲಾಲ್ ಮ್ಯಾಥ್ಯೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಅವರ ಪಾತ್ರಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಡಲಾಗಿದೆ.

ಆಗಸ್ಟ್ 10 ರಂದು ‘ಜೈಲರ್’ ಚಿತ್ರಮಂದಿರಕ್ಕೆ ಬರಲಿದೆ. ಚಿತ್ರದ ಕುರಿತಾಗಿ ಕುತೂಹಲ ಹೆಚ್ಚಾಗಿದ್ದು, ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಜೋರಾಗಿದೆ.

https://twitter.com/Jailer_Movie/status/1688063093363167232

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular