ಕಾರವಾರ: ಅವಧಿ ಮೀರಿದ ಮಾತ್ರೆ ನೀಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮಾಡಿ ಹರಿಬಿಟ್ಟ ಪರಿಣಾಮ ತನ್ನ ತೇಜೋವಧೆಯಾಗಿದ್ದಕ್ಕೆ ಮನ ನೊಂದ ವೈದ್ಯ ರಾಜೀವ್ ಪಿಕಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ಕಣ್ತಪ್ಪಿನಿಂದ ಅವಧಿ ಮೀರಿದ ಮಾತ್ರೆಯೊಂದು ಕೊಟ್ಟಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡೀಯೋ ಹಾಕಿ ವೈರಲ್ ಮಾಡಲಾಗಿತ್ತು. ಈ ಬಗ್ಗೆ ವೈದ್ಯ ರಾಜೀವ್ ಪಿಕಳೆ ಗೊತ್ತಾಗದೇ ಆಗಿರುವ ತಪ್ಪಿನಿಂದ ಮಾತ್ರೆ ಕೊಡಲಾಗಿದೆ. ಅವಧಿ ಮೀರಿದರೂ ಒಂದು ತಿಂಗಳು ಯಾವುದೇ ಸಮಸ್ಯೆಯಿಲ್ಲ. ಆದರೂ ತನ್ನಿಂದಾದ ತಪ್ಪಿಗೆ ಕ್ಷೆಮೆಯಿರಲಿ ಎಂದು ಹೇಳಿದ್ದರು. ಆದರೂ ಅವರ ಬಗ್ಗೆ ಯೂಟ್ಯೂಬ್ ಚಾನಲ್, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಲೇ ಇತ್ತು. ಇದರಿಂದ ಮನನೊಂದ ರಾಜೀವ್ ಪಿಕಳೆ ಡಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯ ರಾಜೀವ್ ಪಿಕಳೆ ಕುಟುಂಬ ತಲೆಮಾರುಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಜನಪ್ರಿಯ. ಕೆಲ ದಿನಗಳ ಹಿಂದೆ ರಾಜೀವ್ ಪಿಕಲೆ ರೋಗಿಯೊಬ್ಬರಿಗೆ ಕೊಟ್ಟಿದ್ದ ಮಾತ್ರ ಅವಧಿ ಮೀರಿತ್ತು. ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಇದರಿಂದ ನೊಂದು ರಾಅಜೀವ್ ಪಿಕಳೆ ಆತ್ಮಹತ್ಯೆಗೆ ಶರಣಾಗಿದ್ದರು. ವಿಡಿಯೋ ವೈರಲ್ ಆದ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪಿಕಳೆ, ಡೆತ್ ನೋಟ್ ಬರೆದಿಟ್ಟು ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದರು
ಪ್ರಕರಣ ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸರು ಇದೀಗ ವಿಡಿಯೋ ಮಾಡಿ ವೈರಲ್ ಮಾಡಿರುವ ಇಬ್ಬರನ್ನು ಬಂಧಿಸಿದ್ದಾರೆ. ಸುಭಾಷ್ ಹಾಗೂ ಹರಿಶ್ಚಂದ್ರ ಬಂಧಿತ ಆರೋಪಿಗಳು. ಇಬ್ಬರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

