ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಬರೋಬ್ಬರಿ 1.97 ಕೋಟಿ ನಕಲಿ ನೋಟು ವಶಕ್ಕೆ

ಜೋಧ್ ಪುರ: ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜಸ್ಥಾನದಲ್ಲಿ 1.97 ಕೋಟಿ ರೂಪಾಯಿ ಮೌಲ್ಯದ ನಕಲಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ನೋಟುಗಳನ್ನು ಕಾರ್ ನಲ್ಲಿ ಸಾಗಿಸುವಾಗ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಕನಿಷ್ಠ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರು ಮೊದಲು ಹಣ ನಿಜವೆಂದು ಭಾವಿಸಿ ಕ್ರಮ ಕೈಗೊಂಡರು. ಆದರೆ, ಕರೆನ್ಸಿ ನೋಟುಗಳು ಒಂದೇ ರೀತಿಯ ಸರಣಿ ಸಂಖ್ಯೆಗಳನ್ನು ಹೊಂದಿದ್ದರಿಂದ ಅವು ನಕಲಿ ಎಂದು ಗೊತ್ತಾಗಿದೆ.

ಜೋಧ್‌ಪುರ ಪೊಲೀಸ್ ಕಮಿಷನರ್ ಡಿ.ಪಿ. ಗೌರವ್ ಯಾದವ್ ಮಾತನಾಡಿ, ಕಾರ್ ನಲ್ಲಿ ಅಪಾರ ಪ್ರಮಾಣದ ಹಣವನ್ನು ಸಾಗಿಸಲಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿ ಬಂದಿದ್ದು, ಅದನ್ನು ಅನುಸರಿಸಿ ಅವರು ರಸ್ತೆಗಳನ್ನು ಬ್ಯಾರಿಕೇಡ್ ಮಾಡಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ 1.97 ಕೋಟಿ ರೂ. ಪತ್ತೆಯಾಗಿದೆ. ಆರಂಭದಲ್ಲಿ ಇದು ಅಸಲಿ ನೋಟು ಎಂದು ಪರಿಗಣಿಸಿ ಕ್ರಮ ಕೈಗೊಂಡ ಪೊಲೀಸರು ನಂತರ ಹಲವು ನೋಟುಗಳು ಒಂದೇ ಸರಣಿಯದ್ದು ಎಂದು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ.

ನಕಲಿ ನೋಟುಗಳ ಮೂಲಗಳು ಮತ್ತು ಹಣದ ಜಾಡು ಪತ್ತೆಗೆ ಎಸಿಪಿ ಮತ್ತು 10 ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read