HomeLatest Newsಐಪಿಎಲ್ ಸ್ಟುಡಿಯೋದಲ್ಲಿ ಮಾವಿನಹಣ್ಣು ಸವಿದ ಸುರೇಶ್ ರೈನಾ-ಪಠಾಣ್ ಜೋಡಿ: ವಿಡಿಯೋ ಶೇರ್ ಮಾಡಿ ಬ್ರಾಂಡ್ ಭಾರತ್...

ಐಪಿಎಲ್ ಸ್ಟುಡಿಯೋದಲ್ಲಿ ಮಾವಿನಹಣ್ಣು ಸವಿದ ಸುರೇಶ್ ರೈನಾ-ಪಠಾಣ್ ಜೋಡಿ: ವಿಡಿಯೋ ಶೇರ್ ಮಾಡಿ ಬ್ರಾಂಡ್ ಭಾರತ್ ಹೆಮ್ಮೆ ಕೊಂಡಾಡಿದ ಪಿಯೂಷ್ ಗೋಯಲ್

ಅಹಮದಾಬಾದ್: ಐಪಿಎಲ್ 2026ರ ಕ್ರಿಕೆಟ್ ಮೈದಾನದಲ್ಲಿ ಸಿಕ್ಸರ್-ಬೌಂಡರಿಗಳ ಜನಾಕರ್ಷಣೆ ಒಂದೆಡೆಯಾದರೆ, ಇತ್ತ ಕಾಮೆಂಟರಿ ಸ್ಟುಡಿಯೋದಲ್ಲಿ ಭಾರತದ ಸಾಂಪ್ರದಾಯಿಕ ಸ್ವಾದವೊಂದು ಭಾರಿ ಸೌಂಡ್ ಮಾಡ್ತಾ ಇದೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ (ಮೇ 21) ನಡೆದ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಹೈ-ವೋಲ್ಟೇಜ್ ಪಂದ್ಯದ ವೇಳೆ, ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿದಂತೆ ಸಹ-ಕಾಮೆಂಟೇಟರ್‌ಗಳು ಲೈವ್ ಶೋನಲ್ಲೇ ಗುಜರಾತ್‌ನ ವಿಶ್ವಪ್ರಸಿದ್ಧ ಮಾವಿನಹಣ್ಣನ್ನು ಸವಿದು ಎಂಜಾಯ್ ಮಾಡಿದ್ದಾರೆ.

ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿರುವ ಈ ಕ್ಯೂಟ್ ವಿಡಿಯೋವನ್ನು ಬಿಜೆಪಿ ಹಿರಿಯ ನಾಯಕ ಪಿಯೂಷ್ ಗೋಯಲ್ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಡಿಜಿಟಲ್ ಜಗತ್ತಿನಲ್ಲಿ ಸದ್ಯ ಇದೇ ಭಾರಿ ಟ್ರೆಂಡಿಂಗ್ ಆಗ್ತಾ ಇದೆ

ಇದು ಬರೀ ಮಾವಿನಹಣ್ಣಲ್ಲ, ರೈತರ ಕಠಿಣ ಶ್ರಮ: ಪಿಯೂಷ್ ಗೋಯಲ್

ವೈರಲ್ ವಿಡಿಯೋವನ್ನು ಶೇರ್ ಮಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಐಪಿಎಲ್‌ನಲ್ಲಿ ಕೇಸರಿ ಬಣ್ಣ ಪಡೆದುಕೊಂಡ ಗೀರ್ ಮಾವು ಗೀರ್‌ನ ತೋಟಗಳಿಂದ ಹಿಡಿದು ಐಪಿಎಲ್‌ನ ಈ ಭವ್ಯ ಕ್ರಿಕೆಟ್ ಸ್ಟೇಜ್‌ವರೆಗೆ ಜಿಐ-ಟ್ಯಾಗ್ (GI-Tagged) ಹೊಂದಿರುವ ಗೀರ್ ಕೇಸರ್ ಮಾವಿನಹಣ್ಣು ಇಂದು ಆಗಮಿಸಿದೆ. ಇದು ಭಾರತದ ಸಿಹಿ, ಗುಣಮಟ್ಟ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಇದು ಕೇವಲ ಮಾವಿನಹಣ್ಣಲ್ಲ, ನಮ್ಮ ತಲೆಮಾರುಗಳ ರೈತರ ಕಠಿಣ ಪರಿಶ್ರಮ, ಪ್ರಾದೇಶಿಕ ಗುರುತು ಮತ್ತು ಲೋಕಲ್ ಗೋಸ್ ಗ್ಲೋಬಲ್ (ಸ್ಥಳೀಯತೆಯಿಂದ ಜಾಗತಿಕ) ಮನೋಭಾವದ ಪ್ರತಿಬಿಂಬವಾಗಿದೆ. ಜಿಐ ಉತ್ಪನ್ನಗಳು ಇಂದು ಬ್ರಾಂಡ್ ಭಾರತ್ ಗೆ ಜಾಗತಿಕ ಮನ್ನಣೆಯನ್ನು ತಂದುಕೊಡುತ್ತಿವೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದಲ್ಲಿ ಗುಜರಾತ್ ಸರ್ಕಾರವು ತನ್ನ ಸಾಂಪ್ರದಾಯಿಕ ಉತ್ಪನ್ನಗಳನ್ನು ಮತ್ತು ಸ್ಥಳೀಯ ರೈತರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ” ಎಂದು ಪ್ರಶಂಸಿಸಿದ್ದಾರೆ.

ಬಂಗಾಳದ ರಸಗುಲ್ಲಾ ಹಂಚಿದ್ದ ಹರಭಜನ್ ಸಿಂಗ್

ಇದಕ್ಕೂ ಮುನ್ನ ಸಚಿವ ಗೋಯಲ್ ಅವರು ಮತ್ತೊಂದು ಇಂಟರೆಸ್ಟಿಂಗ್ ವಿಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರಭಜನ್ ಸಿಂಗ್ ಲೈವ್ ಸ್ಟುಡಿಯೋದಲ್ಲಿ ಭಾರತದ ಜಿಐ-ಟ್ಯಾಗ್ ಪಡೆದಿರುವ ಪ್ರಸಿದ್ಧ ‘ಬಾಂಗ್ಲಾರ್ ರಸಗುಲ್ಲಾ’ (Banglar Rosogolla) ವನ್ನು ಎಲ್ಲರಿಗೂ ಹಂಚಿ ಸಂಭ್ರಮಿಸಿದ್ದರು.

ಈ ವಿಡಿಯೋವನ್ನು ಶೇರ್ ಮಾಡಿ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರನ್ನು ಶ್ಲಾಘಿಸಿದ್ದ ಗೋಯಲ್, ಬಾಯಿ ಸಿಹಿ ಮಾಡಿಕೊಳ್ಳಿ ಏಕೆಂದರೆ ಬಂಗಾಳದ ಯಾವುದೇ ಸಂಭ್ರಮವೂ ರಸಗುಲ್ಲಾ ಇಲ್ಲದೆ ಪೂರ್ಣವಾಗುವುದಿಲ್ಲ. ಐಪಿಎಲ್ ಪ್ರಸಾರದ ವೇಳೆ ಬಂಗಾಳದ ಈ ಟೈಮ್‌ಲೆಸ್ ಸ್ವೀಟ್ ಪ್ರದರ್ಶನಗೊಳ್ಳುತ್ತಿರುವುದು ಸಂತಸ ತಂದಿದೆ. ಸಂಸ್ಕೃತಿ, ವಾಣಿಜ್ಯ ಮತ್ತು ಕ್ರಿಕೆಟ್ ಅನ್ನು ಸುಂದರವಾಗಿ ಸಮ್ಮಿಲನಗೊಳಿಸುವ ಮೂಲಕ ನಾವು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುತ್ತಿದ್ದೇವೆ, ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುತ್ತಿದ್ದೇವೆ ಮತ್ತು ಜಾಗತಿಕವಾಗಿ ಬ್ರಾಂಡ್ ಭಾರತ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular