HomeIndiaSHOCKING NEWS: ರೈಲ್ವೆ ಎಂಜಿನ್ ಹಾಗೂ ಕೋಚ್ ನಡುವೆ ಸಿಲುಕಿದ ನೌಕರ: ಸಹೋದ್ಯೋಗಿಗಳ ಎಡವಟ್ಟಿಗೆ ಸ್ಥಳದಲ್ಲೇ...

SHOCKING NEWS: ರೈಲ್ವೆ ಎಂಜಿನ್ ಹಾಗೂ ಕೋಚ್ ನಡುವೆ ಸಿಲುಕಿದ ನೌಕರ: ಸಹೋದ್ಯೋಗಿಗಳ ಎಡವಟ್ಟಿಗೆ ಸ್ಥಳದಲ್ಲೇ ಸಾವು

ರೈಲ್ವೆ ಎಂಜಿನ್ ಹಾಗೂ ಕೋಚ್ ನಡುವೆ ಸಿಲುಕಿದ ರೈಲ್ವೆ ಡಿಗ್ರೂಪ್ ನೌಕರ, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿ ರೈಲು ನಿಲ್ದಾಣದಲ್ಲಿ ನಡೆದಿದೆ.

25 ವರ್ಷದ ಅಮರ್ ಕುಮಾರ್ ಮೃತ ನೌಕರ. ಫ್ಲಾಟ್ ಫಾರ್ಮ್ 5ರಲ್ಲಿ ನಿಂತಿದ್ದ ಲಖನೌ-ಬರೌನಿ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಹಾಗೂ ಕೋಚ್ ನ್ನು ಜೋಡಿಸುವ ಕೆಲಸದ ವೇಳೆ ಈ ದುರಂತ ಸಂಭವಿಸಿದೆ. ಜೋಡಣಾ ಕಾರ್ಯದ ವೇಳೆ ಪ್ಲೇಟ್ ಗಳ ನಡುವೆ ಅಮರ್ ಕುಮಾರ್ ಸಿಲುಕಿಕೊಂಡು ಅಪ್ಪಚ್ಚಿಯಾಗಿದ್ದಾರೆ. ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ರೈಲ್ವೆ ಸಹದ್ಯೋಗಿಗಳ ಎಡವಟ್ಟಿನಿಂದಾಗಿ ಈ ಘಟನೆ ನಡೆದಿದೆ. ಪಾಯಿಂಟ್ ಮೆನ್ ಗಳ ನಿರ್ಲಕ್ಷ್ಯಕ್ಕೆ ಈ ದುರ್ಘಟನೆ ಸಂಭವಿಸಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಉನ್ನತ ತನಿಖೆಗೆ ಆದೇಶಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular