HomeKarnatakaBIG NEWS: ಆಟವಾಡುತ್ತಿದ್ದಾಗ ನೀರಿನ ತೊಟ್ಟಿಗೆ ಬಿದ್ದ ಬಾಲಕ: ಸ್ಥಳದಲ್ಲೇ ದುರ್ಮರಣ

BIG NEWS: ಆಟವಾಡುತ್ತಿದ್ದಾಗ ನೀರಿನ ತೊಟ್ಟಿಗೆ ಬಿದ್ದ ಬಾಲಕ: ಸ್ಥಳದಲ್ಲೇ ದುರ್ಮರಣ

ಹಾವೇರಿ: ಆಟವಾಡಲು ಹೋಗಿದ್ದ ಬಾಲಕ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ.

9 ವರ್ಷದ ಪ್ರಜ್ವಲ್ ವನಗೆರೆ ಮೃತ ಬಾಲಕ. ಶಾಲೆ ಬಳಿ ಆಟವಾಡಲು ತೆರಳಿದ್ದ ವೇಳೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ತೆಗೆಯಲಾಗಿದ್ದ ನೀರಿನ ತೊಟ್ಟಿಯಲ್ಲಿ ಬಾಲಕ ಬಿದ್ದಿದ್ದಾನೆ. ಎಷ್ಟು ಹೊತ್ತಾದರೂ ಬಾಲಕ ಮನೆಗೆ ವಾಪಾಸ್ ಆಗಿಲ್ಲ. ಮನೆಯವರು ಹುಡುಕಾಟ ನಡೆಸಿದ್ದಾರೆ.

ನೀರಿನ ತೊಟ್ಟಿ ಬಳಿ ಬಂದಾಗ ಬಾಲಕ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿರುವುದು ಗೊತ್ತಾಗಿದೆ. ರಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular