HomeKarnatakaಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ ಮಾಡಿದ ಅಂಗಡಿ ಸೀಜ್, ಮಾಲೀಕನ ವಿರುದ್ಧ ಪ್ರಕರಣ

ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ ಮಾಡಿದ ಅಂಗಡಿ ಸೀಜ್, ಮಾಲೀಕನ ವಿರುದ್ಧ ಪ್ರಕರಣ

ರಾಯಚೂರು: ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಹಣ ವಸೂಲಿ ಮಾಡುತ್ತಿದ್ದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಸಾದಾವೂರಿನ ಖಾಸಗಿ ಅಂಗಡಿಯೊಂದರ ಮೇಲೆ ತಹಶೀಲ್ದಾರ್ ದಾಳಿ ನಡೆಸಿ ಅಂಗಡಿ ಸೀಜ್ ಮಾಡಿದ್ದು, ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಾದಾವೂರಿನ ಗ್ರಾಮ ಒನ್ ಕೇಂದ್ರದಲ್ಲಿ ಸರ್ಕಾರದ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಗ್ರಾಮಒನ್ ಕೇಂದ್ರವನ್ನು ಬಂದ್ ಮಾಡಿ ಇದರ ಪಾಸ್ವರ್ಡ್ ಬಳಕೆ ಮಾಡಿಕೊಂಡು ಲಕ್ಷ್ಮಿ ಕಂಪ್ಯೂಟರ್ ಎಂಬ ಹೆಸರಿನ ಅಂಗಡಿಯವರು ಒಂದು ಅರ್ಜಿಗೆ 200 ರೂಪಾಯಿಯಂತೆ ಗ್ರಾಮದ ಮಹಿಳೆಯರಿಂದ ಹಣ ವಸೂಲಿ ಮಾಡಿ ಯೋಜನೆಗೆ ನೋಂದಾಯಿಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಎಲ್.ಟಿ. ಚಂದ್ರಕಾಂತ್ ದಾಳಿ ನಡೆಸಿದ್ದು, ಅಂಗಡಿಯನ್ನು ಸೀಜ್ ಮಾಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular