HomeKarnatakaಕೋಳಿ ಜೂಜು ಅಡ್ಡೆ ಮೇಲೆ ದಾಳಿ: ಹುಂಜಗಳ ಸಹಿತ ನಗದು ವಶಕ್ಕೆ

ಕೋಳಿ ಜೂಜು ಅಡ್ಡೆ ಮೇಲೆ ದಾಳಿ: ಹುಂಜಗಳ ಸಹಿತ ನಗದು ವಶಕ್ಕೆ

ಶಿವಮೊಗ್ಗ: ಕೋಳಿ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಸಮೀಪದ ನೀರೇರಿ ಗ್ರಾಮದ ಅಕೇಶಿಯಾ ಪ್ಲಾಂಟೇಷನ್‌ ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಲಾಗಿದೆ.

ಹಣ, ಕೋಳಿ ಹುಂಜಗಳನ್ನು ಪಣಕ್ಕಿಟ್ಟು ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರು 11,170 ರೂ. ಹಣವನ್ನು ವಶಕ್ಕೆ ಪಡೆದು, 8 ಮಂದಿ ಆರೋಪಿಗಳ ಸಹಿತ ನಾಲ್ಕು ಕೋಳಿ ಹುಂಜ, ಎರಡು ಕತ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಳಿ ಹುಂಜಗಳ ಕಾಳಗ ನಡೆಸಿ ಬಾಜಿ ಕಟ್ಟಿಸಿಕೊಂಡು ಜೂಜು ನಡೆಸಲಾಗುತ್ತಿತ್ತು. ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular