HomeKarnatakaಪೊಲೀಸ್ ದಾಳಿ ವೇಳೆ ಮಹಡಿಯಿಂದ ಲಕ್ಷಾಂತರ ಹಣ ಎಸೆದ ಜೂಜುಕೋರರು: ಸಿಕ್ಕಷ್ಟು ನೋಟು ಬಾಚಿಕೊಂಡು ಪರಾರಿಯಾದ...

ಪೊಲೀಸ್ ದಾಳಿ ವೇಳೆ ಮಹಡಿಯಿಂದ ಲಕ್ಷಾಂತರ ಹಣ ಎಸೆದ ಜೂಜುಕೋರರು: ಸಿಕ್ಕಷ್ಟು ನೋಟು ಬಾಚಿಕೊಂಡು ಪರಾರಿಯಾದ ಸಾರ್ವಜನಿಕರು

ಯಾದಗಿರಿ: ಜೂಜು ಅಡ್ಡೆಯ ಮೇಲೆ ಪೊಲೀಸರ ದಾಳಿ ನಡೆಸಿದ್ದು, ಈ ವೇಳೆ ಜೂಜುಗಾರರು ಮನೆ ಮಹಡಿಯಿಂದ ಲಕ್ಷಾಂತರ ಹಣ ಎಸೆದು ಪರಾರಿಯಾಗಿದ್ದಾರೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನೋಟುಗಳನ್ನು ಬಾಚಿಕೊಂಡ ಸಾರ್ವಜನಿಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರದ ಬಾಪೂಗೌಡ ನಗರದಲ್ಲಿ ಪ್ರಭಾವಿ ರಾಜಕೀಯ ನಾಯಕರೊಬ್ಬರ ಸಂಬಂಧಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ಬಾಜಿಯಾಗಿಟ್ಟು ಜೂಜಾಟ ನಡೆಸುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಯಾದಗಿರಿ ಸೈಬರ್ ಕ್ರೈಂ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ.

ಏಕಾಏಕಿ ಪೊಲೀಸರ ದಾಳಿಯಿಂದ ಕಕ್ಕಾಬಿಕ್ಕಿಯಾದ ಜೂಜುಗಾರರು ಲಕ್ಷಾಂತರ ರೂಪಾಯಿ ಹಣವನ್ನು ಮನೆ ಮೇಲಿನ ಮಹಡಿಯಿಂದ ಕೆಳಗೆ ತೂರಿದ್ದಾರೆ. ಮನೆ ಪಕ್ಕದ ರಸ್ತೆಗಳ ಮೇಲೆಯೂ ನೋಟುಗಳು ಬಿದ್ದಿದ್ದು, ಅಲ್ಲಿದ್ದ ಕೆಲವರು ಸಿಕ್ಕಷ್ಟು ನೋಟುಗಳನ್ನು ಬಾಚಿಕೊಂಡು ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪೊಲೀಸರ ದಾಳಿಗೆ ಕೆಲ ನಿಮಿಷ ಮೊದಲು ವ್ಯಕ್ತಿಯೊಬ್ಬ 50 ಲಕ್ಷ ರೂಪಾಯಿಗಳನ್ನು ಬಾಜಿಯಲ್ಲಿ ಗೆದ್ದುಕೊಂಡು ಹೋಗಿದ್ದ ಎಂದು ಹೇಳಲಾಗಿದೆ. ಪೊಲೀಸ್ ದಾಳಿಯ ಸಂದರ್ಭದಲ್ಲಿ 10.43 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ. 16 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, 13 ಜನರನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular