HomeKarnatakaಮಹಿಳಾ ಲ್ಯಾಬ್ ಟೆಕ್ನಿಶಿಯನ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮಹಿಳಾ ಲ್ಯಾಬ್ ಟೆಕ್ನಿಶಿಯನ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ರಾಯಚೂರು: ಕೆಲ ದಿನಗಳ ಹಿಂದೆ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಓರ್ವರ ಮೃತದೇಹ ಸುಟ್ಟುಕರಕಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದ ಜಿ.ಆರ್.ಕಾಲೋನಿಯಲ್ಲಿ ಮಹಿಳೆ ಮಂಜುಳಾ (45) ಶವ ಸುಟ್ಟ ರೀತಿಯಲ್ಲಿ ಪತ್ತೆಯಾಗಿತ್ತು. ಮಹಿಳೆ ಖಿನ್ನತೆಯಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಗಿ ಆಕೆ ಸಹೋದರ ದೂರು ದಾಖಲಿಸಿದ್ದ. ಆದರೆ ಮಹಿಳೆಯ ಸಾವಿನ ಬಗ್ಗೆ ಆಕೆಯ ಮಗ ಹಾಗೂ ತಾಯಿ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಮಹಿಳೆ ಮಂಜುಳಾ ಸಾವಿನ ಬಗ್ಗೆ ಮಗ ಸಚಿನ್ ಪಾಲ್ ಶಂಕೆ ವ್ಯಕ್ತಪಡಿಸಿದ್ದು, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರುವ ಅನುಮಾನವಿದ್ದು, ತನಿಖೆ ನಡೆಸುವಂತೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅ.28ರಂದು ತಾನು ಹಾಗೂ ಸಹೋದರಿ ಬೆಂಗಳೂರಿಗೆ ತೆರಳುತ್ತಿದ್ದಂತೆ ಮಾರನೆಯ ದಿನ ಅ.29ರಂದು ತಾಯಿ ಮಂಜುಳಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಕೆಲ ದಿನಗಳ ಹಿಂದೆ ತನ್ನ ತಾಯಿ ಬ್ಯಾಂಕ್ ನಿಂದ 10 ಲಕ್ಷ ಹಣ ಪಡೆದು ವಿತ್ ಡ್ರಾ ಮಾಡಿದ್ದರು. ಹಣ ಹಾಗೂ ಮನೆಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣ ಕೂಡ ನಾಪತ್ತೆಯಾಗಿದೆ. ಬ್ಲ್ಯಾಕ್ ಮೇಲ್ ಮಾಡಿ ತನ್ನ ತಾಯಿಯನ್ನು ಸಾಯಿಸಿ ಪೆಟ್ರೋಲ್, ಕೆಮಿಕಲ್ ಹಾಕಿ ಸುಟ್ಟಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular