HomeLatest NewsBREAKING: ಸಾಲ ಕೊಡಿಸಿದ ವಿಚಾರವಾಗಿ ಪತಿ-ಪತ್ನಿ ಜಗಳ: ಮನನೊಂದ ಹೆಂಡತಿ ಆತ್ಮಹತ್ಯೆಗೆ ಶರಣು

BREAKING: ಸಾಲ ಕೊಡಿಸಿದ ವಿಚಾರವಾಗಿ ಪತಿ-ಪತ್ನಿ ಜಗಳ: ಮನನೊಂದ ಹೆಂಡತಿ ಆತ್ಮಹತ್ಯೆಗೆ ಶರಣು

ರಾಯಚೂರು: ಸಾಲ ಕೊಡಿಸಿದ್ದಕ್ಕೆ ಪತಿ -ಪತ್ನಿ ವಿಚಾರವಾಗಿ ಜಗಳ, ಗಲಾಟೆ ತಾರಕಕ್ಕೇರಿದ್ದು ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಈ ಘಟನೆ ನಡೆದಿದೆ. ಪಾಪಮ್ಮ (24) ಆತ್ಮಹತ್ಯೆಗೆ ಶರಣಾದ ಮಹಿಳೆ. 2020 ರಲ್ಲಿ ಪಾಪಮ್ಮ ಹಾಗೂ ಮರಿಸ್ವಾಮಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಪಾಪಮ್ಮ ಪತಿಯ ಅಣ್ಣನಿಗೆ ಸಾಲ ಕೊಡಿಸಿದ್ದಳು. ಇದೇ ವಿಚಾರವಾಗಿ ಪತಿ ಮರಿಸ್ವಾಮಿ ಗಲಾಟೆ ಅಮಡುತ್ತಿದ್ದ. ಸಣ್ಣ ಪುಣ್ಣ ವಿಚಾರವಾಗಿಯೂ ಪತಿ-ಪತ್ನಿ ನಡುವೆ ಜಗಳವಾಗುತ್ತಲೇ ಇತ್ತು.

ಖಾಸಗಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದ ಪಾಪಮ್ಮ ಆ ಹಣವನ್ನು ಪತಿಯ ಅಣ್ಣ ಮೌನೇಶ್ ಗೆ ನೀಡಿದ್ದಳು. ಸಾಲ ಪಡೆದಿದ್ದ ಮೌನೇಶ್ ಸಾಲ ಮರುಪಾವತಿ ಮಾಡದೇ ಓಡಾಡುತ್ತಿದ್ದ. ಸಾಲ ಮರುಪಾವತಿ ಮಡದ ವಿಚಾರವಾಗಿ ಪತಿ-ಪತ್ನಿ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗುತ್ತಿತ್ತು. ಇದೇ ವಿಚಾರವಾಗಿ ಮನನೊಂದ ಪಾಪಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತಿಯ ಅಣ್ಣ ಮೌನೇಶ್ ನಿಂದ ಪಾಪಮ್ಮ ಸಾವಾಗಿದೆ ಎಂದು ಪಾಪಮ್ಮ ಸಹೋದರ ಮಹದೇವಪ್ಪ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಮೌನೇಶ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular