HomeKarnatakaಸೋದರತ್ತೆ ಕಾಟಕ್ಕೆ ಬೇಸತ್ತ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

ಸೋದರತ್ತೆ ಕಾಟಕ್ಕೆ ಬೇಸತ್ತ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

ರಾಯಚೂರು: ಸೋದರತ್ತೆಯ ಕಾಟಕ್ಕೆ ಮನನೊಂದ ಅಳಿಯನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹುಲಿಗೇಪ್ಪ (20) ಮೃತ ಯುವಕ. ಜಮೀನು ವಿಚಾರವಾಗಿ ಸೋದರತ್ತೆ ಹಾಗೂ ಹುಲಿಗೇಪ್ಪನ ನಡುವೆ ಆಗಾಗಾ ಜಗಳವಾಗುತ್ತಿತ್ತು. ಅತ್ತೆ ಹುಲಿಗೇಪ್ಪಗೆ ಬೆದರಿಕೆಯನ್ನೂ ಹಾಕಿದ್ದರು.

ಇದರಿಂದ ಮನನೊಂದ ಹುಲಿಗೇಪ್ಪ ಡೆತ್ ನೋಟ್ ಬರೆದಿಟ್ಟು ವಿಷ ಸೇವೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ನಲ್ಲಿ ಅತ್ತೆ ಲಕ್ಷ್ಮೀದೇವಿ, ಅತ್ತೆ ಮಗಳು ಅನುರಾಧ, ಮಹಾದೇವಿ, ಅನಿಲ್ ಎಂಬುವವರ ಹೆಸರು ಉಲ್ಲೇಖಿಸಿದ್ದಾನೆ. ನನ್ನ ಸಾವಿಗೆ ನನ್ನ ಅತ್ತೆ ಲಕ್ಷ್ಮೀದೇವಿ ಹಾಗೂ ಆಕೆಯ ಮಕ್ಕಳೇ ಕಾರಣ ಎಂದು ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿರಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular