HomeKarnatakaತಿಂಡಿ ಕೊಡಲು ತಡ ಮಾಡಿದ್ದಕ್ಕೆ ಹೋಟೆಲ್ ಮಾಲೀಕನ ಮುಖಕ್ಕೆ ಎಣ್ಣೆ ಎರಚಿದ ಗ್ರಾಹಕ

ತಿಂಡಿ ಕೊಡಲು ತಡ ಮಾಡಿದ್ದಕ್ಕೆ ಹೋಟೆಲ್ ಮಾಲೀಕನ ಮುಖಕ್ಕೆ ಎಣ್ಣೆ ಎರಚಿದ ಗ್ರಾಹಕ

ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೋಳ್ಳಿ ಗ್ರಾಮದಲ್ಲಿ ತಿಂಡಿ ಕೊಡಲು ತಡ ಮಾಡಿದ್ದಕ್ಕೆ ಗ್ರಾಹಕನೊಬ್ಬ ಹೋಟೆಲ್ ಮಾಲೀಕನ ಮುಖಕ್ಕೆ ಬಿಸಿ ಎಣ್ಣೆ ಎರಚಿದ್ದಾನೆ.

ಭೀಮಾನಾಯಕ್ ಎಂಬಾತ ಹೋಟೆಲ್ ನಲ್ಲಿ ತಿಂಡಿ ತಿನ್ನಲು ಬಂದಿದ್ದಾನೆ. ಮಂಡಕ್ಕಿ ಒಗ್ಗರಣೆ ಹಾಕಿ ಕೊಡುವಲ್ಲಿ ತಡವಾಗಿದ್ದು, ಹೋಟೆಲ್ ಮಾಲೀಕ ರಂಗಯ್ಯ ಶೆಟ್ಟಿ ಅವರ ಮುಖಕ್ಕೆ ಎಣ್ಣೆ ಎರಚಿದ್ದಾನೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜೋಳ್ಳಿ ಗ್ರಾಮದ ಭೀಮಾನಾಯ್ ಬೆಳಿಗ್ಗೆ ಹೋಟೆಲ್ ಗೆ ಬಂದು ಇಡ್ಲಿ ಕೇಳಿದ್ದಾನೆ. ಇಡ್ಲಿ ಖಾಲಿ ಆಗಿದೆ ಎಂದು ರಂಗಯ್ಯ ಶೆಟ್ಟಿ ವಾಪಸ್ ಕಳಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಬಂದ ಭೀಮಾನಾಯಕ್ ಮಂಡಕ್ಕಿ ಒಗ್ಗರಣೆ, ಮಿರ್ಚಿ ಕೊಡುವಂತೆ ಕೇಳಿದ್ದಾನೆ. ಒಗ್ಗರಣೆ ತರಲು ತಡವಾಗಿದ್ದರಿಂದ ಆಕ್ರೋಶಗೊಂಡು ಉಪ್ಪಿಟ್ಟು ಮಾಡಲು ಇಟ್ಟಿದ್ದ ಬಿಸಿ ಎಣ್ಣೆಯನ್ನು ರಂಗಯ್ಯ ಶೆಟ್ಟಿ ಮೇಲೆ ಎರಚಿ ಪರಾರಿಯಾಗಿದ್ದಾನೆ. ರಂಗಯ್ಯ ಶೆಟ್ಟಿ ಅವರನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular