HomeLatest NewsBREAKING: ಟೀ ಕುಡಿಯುತ್ತಿದ್ದಾಗಲೇ ದುರಂತ: ಅಂಗಡಿ ಪಕ್ಕದ ಮನೆ ಗೋಡೆ ಕುಸಿದು ವೃದ್ಧೆ ಸ್ಥಳದಲ್ಲೇ ಸಾವು

BREAKING: ಟೀ ಕುಡಿಯುತ್ತಿದ್ದಾಗಲೇ ದುರಂತ: ಅಂಗಡಿ ಪಕ್ಕದ ಮನೆ ಗೋಡೆ ಕುಸಿದು ವೃದ್ಧೆ ಸ್ಥಳದಲ್ಲೇ ಸಾವು

ರಾಯಚೂರು: ಮನೆ ಮೇಲ್ಛಾವಣಿ ಕುಸಿದು ಬಿದ್ದು ಟೀ ಕುಡಿಯುತ್ತಿದ್ದ ವೃದ್ಧೆ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ನಗರದ ಗಂಜ್ ಸರ್ಕಲ್ ಬಳಿ ಈ ದುರಂತ ಸಂಭವಿಸಿದೆ. 60 ವರ್ಷದ ವೃದ್ಧೆ ಮೃತ ದುರ್ದೈವಿ. ಟೀ ಕುಡಿಯಲೆಂದು ವೃದ್ಧೆ ಅಂಗಡಿಗೆ ಬಂದಿದ್ದರು. ಅಂಗಡಿ ಬಳಿ ನಿಂತು ಟೀ ಕುಡಿಯುತ್ತಿದ್ದ ವೇಳೆ ಅಂಗಡಿಯ ಪಕ್ಕದಲ್ಲಿರುವ ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಬಿದ್ದಿದೆ.

ಅವಶೇಷಗಳ ಅಡಿ ಸಿಲುಕಿದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮಾರ್ಕೆಟ್ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular