HomeLive Newsಪ್ರಧಾನಿ ಮೋದಿ ಡೊನಾಲ್ಡ್ ಟ್ರಂಪ್ ನಿಯಂತ್ರಣದಲ್ಲಿದ್ದಾರೆ: ಟ್ರಂಪ್ ತನ್ನನ್ನು ನಿಯಂತ್ರಿಸಿದಂತೆ ಮೋದಿ ದೆಹಲಿಯಿಂದ ತಮಿಳುನಾಡು ನಿಯಂತ್ರಿಸಲು...

ಪ್ರಧಾನಿ ಮೋದಿ ಡೊನಾಲ್ಡ್ ಟ್ರಂಪ್ ನಿಯಂತ್ರಣದಲ್ಲಿದ್ದಾರೆ: ಟ್ರಂಪ್ ತನ್ನನ್ನು ನಿಯಂತ್ರಿಸಿದಂತೆ ಮೋದಿ ದೆಹಲಿಯಿಂದ ತಮಿಳುನಾಡು ನಿಯಂತ್ರಿಸಲು ಯತ್ನಿಸಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಯಂತ್ರಣದಲ್ಲಿದ್ದಾರೆ. ಟ್ರಂಪ್ ಜಿಗಿಯಲು ಹೇಳಿದರೆ ಜಿಗಿಯುತ್ತಾರೆ. ಮಲಗಲು ಹೇಳಿದರೆ ಮಲಗುತ್ತಾರೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ತಮಿಳುನಾಡಿನ ಪೊನ್ನೇರಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರನ್ನು ಟ್ರಂಪ್ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದಾರೆ. ಮೋದಿಯವರ ಹಣಕಾಸು ನೀತಿ, ಅದಾನಿ ಜೊತೆಗಿರುವ ಸಂಬಂಧಗಳ ಬಗ್ಗೆ ಟ್ರಂಪ್ ಗೆ ಅರಿವಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟ್ರಂಪ್ ತನ್ನನ್ನು ನಿಯಂತ್ರಿಸುತ್ತಿರುವಂತೆಯೇ ಮೋದಿಯವರು ತಮಿಳುನಾಡು ಮುಖ್ಯಮಂತ್ರಿ ವಿಷಯದಲ್ಲಿಯೂ ಇದನ್ನೇ ಮಾಡಲು ಹೊರಟಿದ್ದಾರೆ. ಅದಕ್ಕಾಗಿಯೇ ತಮಿಳುನಾಡಿನಲ್ಲಿ ಎಐಎಡಿಎಂಕೆಯನ್ನು ಅಧಿಕಾರಕ್ಕೆ ತರಲು ಬಯಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ತಮಿಳುನಾಡು ಮುಖ್ಯಮಂತ್ರಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಎಐಎಡಿಎಂಕೆ ಅಧಿಕಾರಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ. ಬಿಜೆಪಿ ತಮಿಳುನಾಡಿನಲ್ಲಿ ಪಾಲುದಾರನನ್ನು ಬಯಸುತ್ತಿದೆ. ದೆಹಲಿಯಿಂದ ತಮಿಳುನಾಡು ರಾಜ್ಯವನ್ನು ಆಳಲು ಅವರಿಗೆ ಅವಕಾಶ ನೀಡುತ್ತದೆ.

ಎಐಎಡಿಎಂಕೆ, ಡಿಎಂಕೆಯಂತೆ ತಮಿಳು ಜನರನ್ನು ರಕ್ಷಿಸುವ ದೊಡ್ಡ ಸಂಪ್ರದಾಯವನ್ನು ಹೊಂದಿತ್ತು. ಆದರೆ ಎಐಎಡಿಎಂಕೆ ಬಹಳ ಹಿಂದೆಯೇ ಸತ್ತುಹೋಗಿದೆ. ಹೊಸ ಎಐಎಡಿಎಂಕೆ ಕೇವಲ ಮುಖವಾಡ; ಈ ಮುಖವಾಡ ಬಿಜೆಪಿಯನ್ನು ಮರೆಮಾಡುತ್ತದೆ.

ಸಂಸತ್ತಿನಲ್ಲಿ ಮಂಡಿಸಲಾದ ಕ್ಷೇತ್ರ ಪುನರ್​​ವಿಂಗಡಣೆ ಮತ್ತು ಇತರ ಮಸೂದೆಗಳ ಕುರಿತು ಮಾತನಾಡಿದ ರಾಹುಲ್ ಗಾಂಧಿ, ದಕ್ಷಿಣ ರಾಜ್ಯಗಳು, ಸಣ್ಣ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳ ಬಲವನ್ನು ದುರ್ಬಲಗೊಳಿಸುವ ಉದ್ದೇಶ ಬಿಜೆಪಿಯದ್ದಾಗಿದೆ. ಕೇಂದ್ರ ಸರ್ಕಾರ ಏಪ್ರಿಲ್ 16 ರಂದು ಹೊಸ ಮಸೂದೆಯನ್ನು ತಂದಿದೆ. ಅವರು ಮಹಿಳಾ ಮಸೂದೆ ಹೆಸರಲ್ಲಿ ಮೂರು ಮಸೂದೆ ತರಲು ಹೊರಟಿದ್ದಾರೆ. ಆದರೆ ಮಹಿಳಾ ಮೀಸಲಾತಿ ಮಸೂದೆಯನ್ನು 2023 ರಲ್ಲಿಯೇ ಅಂಗೀಕರಿಸಲಾಯಿತು. ಮಹಿಳಾ ಮಸೂದೆ ಎಂದು ಕರೆಯುತ್ತಾ, ಅವರು ಕ್ಷೇತ್ರ ವಿಂಗಡಣೆ ಮಾಡುತ್ತಿದ್ದಾರೆ. ಭಾರತದ ಒಕ್ಕೂಟದಲ್ಲಿ ತಮಿಳುನಾಡಿನ ಪ್ರಾತಿನಿಧ್ಯವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿತ್ತು ಎಂದರು.

ಸೀಮಿತ ವಿಂಗಡಣೆಯನ್ನು ಮರೆಮಾಡಿದ ಮಸೂದೆಯನ್ನು ನಾವು ಸಂಸತ್ತಿನಲ್ಲಿ ಸೋಲಿಸಿದ್ದೇವೆ; ಭಾರತದ ಕಲ್ಪನೆಯನ್ನು ರಕ್ಷಿಸಲು ನಾವು ಅದನ್ನು ಸೋಲಿಸಿದ್ದೇವೆ. ರಾಜ್ಯ, ತಮಿಳುಭಾಷೆ ಮತ್ತು ಅದರ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಆರ್‌ಎಸ್‌ಎಸ್, ಬಿಜೆಪಿ ಪ್ರಯತ್ನಿಸುತ್ತಿರುವುದನ್ನು ನೋಡಿದಾಗಲೆಲ್ಲಾ ನಾನು ತಮಿಳಿನವನಂತೆ ಭಾಸವಾಗುತ್ತೇನೆ ಎಂದರು.

ಭಾರತವು ರಾಜ್ಯಗಳ ಒಕ್ಕೂಟವಾಗಿರುವುದರಿಂದ, ಪ್ರತಿಯೊಂದು ರಾಜ್ಯವೂ ಧ್ವನಿಯನ್ನು ಹೊಂದಿರಬೇಕು. ತನ್ನನ್ನು ತಾನು ವ್ಯಕ್ತಪಡಿಸಲು ಮುಕ್ತವಾಗಿರಬೇಕು ಮತ್ತು ತನ್ನ ಸಂಪ್ರದಾಯಗಳನ್ನು ರಕ್ಷಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ತಿಳಿಸ್ದಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular