HomeIndiaದೇಶದ ಜನ ಕಣ್ಣೀರು ಹಾಕುತ್ತಿದ್ರೆ, ಮೋದಿ ಮೆಲೋನಿಗೆ ಚಾಕೋಲೆಟ್ ನೀಡಿ ನಗುತ್ತಿದ್ದಾರೆ; ಇದೊಂದು ನಾಯಕತ್ವನಾ? ಎಂದು...

ದೇಶದ ಜನ ಕಣ್ಣೀರು ಹಾಕುತ್ತಿದ್ರೆ, ಮೋದಿ ಮೆಲೋನಿಗೆ ಚಾಕೋಲೆಟ್ ನೀಡಿ ನಗುತ್ತಿದ್ದಾರೆ; ಇದೊಂದು ನಾಯಕತ್ವನಾ? ಎಂದು ಜಾಡಿಸಿದ ರಾಹುಲ್ ಗಾಂಧಿ

ಇತ್ತೀಚೆಗಷ್ಟೆ ವಿಡಿಯೊ ಮಾಡಿ ಚಿನ್ನ ಖರೀದಿ ಕಡಿಮೆ ಮಾಡಿ, ವಾಹನ ಬಳಕೆ ಕಡಿಮೆ ಮಾಡಿ, ವಿದೇಶ ಪ್ರಯಾಣ ಕಡಿಮೆ ಮಾಡಿ ಎಂದು ಜನರಿಗೆ ಸಂದೇಶ ಸಾರಿ ಭಾರೀ ಸುದ್ದಿಯಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸದ್ಯ ರೋಮ್ ಪ್ರವಾಸದಲ್ಲಿದ್ದು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಮೆಲೋಡಿ ಚಾಕೋಲೇಟ್ ನೀಡಿ ಮತ್ತೊಮ್ಮೆ ಸುದ್ದಿಗೀಡಾಗಿದ್ದಾರೆ.

ಮೋದಿ ತನಗಾಗಿ ಮೆಲೋಡಿ ಚಾಕೋಲೇಟ್ ಪೊಟ್ಟಣವನ್ನು ನೀಡಿದ್ದನ್ನು ವಿಡಿಯೊ ಮಾಡಿಕೊಂಡು ತನ್ನ ಸಾಮಾಜಿಕ ಜಾಲತಾಣದಲ್ಲಿ ಮೆಲೊನಿ ಹಂಚಿಕೊಂಡಿದ್ದಾರೆ. ಈ ನಡೆಯನ್ನು ಮೋದಿ ಹಿಂಬಾಲಕರು ನಿರೀಕ್ಷೆಯಂತೆ ಕೊಂಡಾಡಿದರೆ, ವಿರೋಧಿಗಳು ಏನ್ ಡ್ರಾಮಾ ಗುರು ಎಂದು ಟ್ರೋಲ್ ಮಾಡಿದ್ದಾರೆ.

ಕಳೆದ ವಾರವಷ್ಟೇ ಪರಿಸ್ಥಿತಿ ಗಂಭೀರವಾಗಿದೆ, ಸಾರ್ವಜನಿಕರು ಜಾಗರೂಕತೆಯಿಂದ ಇರಿ, ಪ್ರವಾಸ ಬೇಡ, ಚಿನ್ನ ಖರೀದಿ ಬೇಡ ಎಂದು ಉಪದೇಶ ಕೊಟ್ಟು ಇಂದು ರೀಲ್‌ಗಾಗಿ ಚಾಕೊಲೇಟ್ ಹಂಚುವ ಅಗತ್ಯವಿತ್ತಾ ಎಂದು ಟೀಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಹ ಮೋದಿಯವರ ಈ ಚಾಕೋಲೇಟ್ ರೀಲ್ ಬಗ್ಗೆ ಟೀಕೆ ಮಾಡಿದ್ದು, ಟ್ವೀಟ್ ಮಾಡಿದ್ದಾರೆ. ‘ನಮ್ಮ ತಲೆ ಮೇಲೆ ಕೆಟ್ಟ ಆರ್ಥಿಕ ಪರಿಸ್ಥಿತಿಯ ಬಿರುಗಾಳಿ ಹಾರಾಡುತ್ತಿದ್ದರೆ ಮೋದಿ ಇಟಲಿಯಲ್ಲಿ ಚಾಕೋಲೇಟ್ ಹಂಚುವುದರಲ್ಲಿ ಬ್ಯುಸಿ ಇದ್ದಾರೆ. ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳು ಕಣ್ಣೀರಿಡುತ್ತಿದ್ದರೆ, ಮೋದಿ ನಗುತ್ತಾ ರೀಲ್ ಮಾಡುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ಇದಕ್ಕೆ ಚಪ್ಪಾಳೆ ತಟ್ಟುತ್ತಿದ್ದಾರೆ. ಇದು ನಾಯಕತ್ವವಲ್ಲ, ನಾಟಕ’ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular