HomeEntertainmentರಾಜನನ್ನು ರಾಜನ ಥರ ನೋಡೋಕೆ ಇಷ್ಟ; ದರ್ಶನ್ ಈ ಸ್ಥಿತಿಯಲ್ಲಿ ನೋಡಲು ಕಷ್ಟವಾಗುತ್ತೆ: ಭಾವುಕಳಾದ ರಚಿತಾ...

ರಾಜನನ್ನು ರಾಜನ ಥರ ನೋಡೋಕೆ ಇಷ್ಟ; ದರ್ಶನ್ ಈ ಸ್ಥಿತಿಯಲ್ಲಿ ನೋಡಲು ಕಷ್ಟವಾಗುತ್ತೆ: ಭಾವುಕಳಾದ ರಚಿತಾ ರಾಮ್

ಬೆಂಗಳೂರು: ನಟ ದರ್ಶನ್ ಅವರನ್ನು ಜೈಲಿನಲ್ಲಿರುವ ಸ್ಥಿತಿಯಲ್ಲಿ ನೋಡಲು ತುಂಬಾ ಕಷ್ಟವಾಗುತ್ತೆ. ಅವರು ಆರೋಗ್ಯವಾಗಿ, ಆರಾಮವಾಗಿದ್ದಾರೆ. ನೋಡಿದಾಕ್ಷಣ ಎಲ್ಲರೂ ಭಾವುಕರಾದೆವು ಎಂದು ನಟಿ ರಚಿತಾ ರಾಮ್ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಭೇಟಿಗಾಗಿ ರಚಿತಾ ರಾಮ್ ಪರಪ್ಪನ ಅಗ್ರಹಾರ ಜೈಲಿಗೆ ಬಂದು ಭೇಟಿಯಾಗಿದ್ದಾರೆ. ದರ್ಶನ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಚಿತಾ, ರಾಜನನ್ನು ರಾಜನ ಥರ ನೋಡೋಕೆ ಇಷ್ಟ. ಜೈಲಿನಲ್ಲಿ ಈ ಸ್ಥಿತಿಯಲ್ಲಿ ಅವರನ್ನು ನೋಡಲು ಕಷ್ಟವಾಗುತ್ತೆ ಎಂದು ಭಾವುಕರಾದರು.

ಜೈಲಿನಲ್ಲಿ ನೋಡಿದಾಕ್ಷಣ ನಾವೆಲ್ಲರೂ ಭಾವುಕರಾದೆವು. ಅವರೇ ನಮಗೆ ಸಮಾಧಾನ ಮಾಡಿದರು. ಆರಾಮವಾಗಿ, ಆರೋಗ್ಯವಾಗಿ ಇದ್ದೇನೆ ಎಂದು ದರ್ಶನ್ ಹೇಳಿದ್ದಾರೆ. ಎಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಾವೆಲ್ಲರೂ ನಿಮ್ಮ ಬರುವಿಕೆಗೆ ಕಾಯುತಿದ್ದೇವೆ ಎಂದು ಹೇಳಿಬಂದಿದ್ದೇನೆ. ದರ್ಶನ್ ಸರ್ ಆದಷ್ಟು ಬೇಗ ಹೊರ ಬರುತ್ತಾರೆ. ಕಾನೂನಿನ ಮೇಲೆ ವಿಶ್ವಾಸವಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ದರ್ಶನ್ ಅವರ ಬ್ಯಾನರ್ ನಿಂದ ಪರಿಚಯವಾದವಳು. ನನಗೆ ಇವತ್ತು ಏನೇ ಹೆಸರು ಇದ್ದರೂ ಅದು ಅವರಿಂದ ಸಿಕ್ಕಿದೆ. ಅವರು ಅವಕಾಶ ಕೊಟ್ಟಿದ್ದಕ್ಕೆ ನಾನು ಬಿಂದ್ಯಾ ರಾಮ್ ನಿಂದ ಇಂದು ರಚಿತಾ ರಾಮ್ ಆಗಿ ಬೆಳೆದಿದ್ದು. ನಾನು ಯಾವತ್ತೂ ಅವರ ಕುಟುಂಬಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular