ಮಿರ್ಜಾಪುರ: ನಾಯಿ ಕಡಿತದ ಪರಿಣಾಮ ಬಾಲಕನೊಬ್ಬನಿಗೆ ರೇಬಿಸ್ ಕಾಅಯಿಲೆ ಬಂದಿದ್ದು, ಆತನ ಸ್ಥಿತಿ ಗಂಭೀರವಾಗಿರುವ ಘಟನೆ ಮಿರ್ಜಾಪುರದಲ್ಲಿ ನಡೆದಿದೆ.
14 ವರ್ಷದ ಬಾಲಕ ನಾಯಿ ಕಡಿತದಿಂದ ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆರಂಭದಲ್ಲಿ ಬಾಲಕನಿಗೆ ರೇಬಿಸ್ ಬಂದಿದೆ ಎಂದು ಪೋಷಕರಿಗೆ, ಕುಟುಂಬದವರಿಗೆ ಗೊತ್ತಾಗಿಲ್ಲ. ಈ ಬಗ್ಗೆ ಅವರಿಗೆ ಅರಿವಿರದ ಕಾರಣ ಬಾಲಕನಿಗೆ ದೆವ್ವವೇನೋ ಮೆಟ್ಟಿಕೊಂಡಿರಬೇಕೆಂದು ವಿವಿಧ ದೇವಸ್ಥಾನಗಳಿಗೆ ಕರೆದೊಯ್ದು ಪೂಜೆ-ಪುನಸ್ಕಾರಗಳಲ್ಲಿ ತೊಡಗಿದ್ದಾರೆ.
ಆದರೆ ಬಾಲಕ ಗುಣಮುಖನಗಿಲ್ಲ. ಕಾಯಿಲೆ ಉಲ್ಬಣಗೊಂಡಿದೆ. ಈ ವೇಳೆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ರೇಬಿಸ್ ಎಂದು ತಿಳಿದಿದ್ದಾರೆ. ಅಲ್ಲದೇ ಬಾಲಕನನ್ನು ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದ್ದಾರೆ.
ಬಾಲಕನ ಸ್ಥಿತಿ ಗಂಭೀರವಾಗಿದೆ. ನಾಯಿ ದಾಳಿ ಅಥವಾ ಕಡಿತದ ಬಗ್ಗೆ ಹಾಗೂ ಮಕ್ಕಳಿಗೂ ಕೂಡ ರೇಬಿಸ್ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಬಾಲಕನನ್ನು ಆಸ್ಪತ್ರೆಗೆ ದಾಅಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

